ಲಾಕ್‌ಡೌನ್‌ನಿಂದಾಗಿ ಬರೀ ಕಳೆದುಕೊಂಡಿಲ್ಲ, ಗಳಿಸಿಯೂ ಕೊಂಡಿದ್ದೇವೆ – ಏನದು?

Home ಲೇಖನಗಳು ಲಾಕ್‌ಡೌನ್‌ನಿಂದಾಗಿ ಬರೀ ಕಳೆದುಕೊಂಡಿಲ್ಲ, ಗಳಿಸಿಯೂ ಕೊಂಡಿದ್ದೇವೆ – ಏನದು?

ಲಾಕ್‌ಡೌನ್‌ನಿಂದಾಗಿ ಬರೀ ಕಳೆದುಕೊಂಡಿಲ್ಲ, ಗಳಿಸಿಯೂ ಕೊಂಡಿದ್ದೇವೆ – ಏನದು?

ಕೊರೊನಾ ಲಾಕ್‌ಡೌನ್‌ನಿಂದಾಗಿ ಮನೆ ಯೊಳಗೇ ಇರಬೇಕಾದ ಅನಿವಾರ್ಯತೆಯಲ್ಲಿ ನಮ್ಮ ಆಟ, ಪಾಠ, ಕೂಟ, ನೋಟ, ಚಟ, ತಿರುಗಾಟ, ಮಾರಾಟ ಏನೆಲ್ಲಾ ಕಳೆದು  ಕೊಂಡೆವು ಎಂದು ಲೆಕ್ಕ ಹಾಕಿ ಪರಿತಪಿಸುವವರು ಇಂತಹ ನಕಾರಾತ್ಮಕ ಯೋಚನೆ ಬಿಟ್ಟು, ನಾವೇನೂ ಕಳೆದುಕೊಂಡಿಲ್ಲ, ನಮ್ಮ ಜೀವ ಉಳಿಸಿಕೊಂಡು ದೇಶದ ಜನರ ಜೀವ ಉಳಿಯಲೂ ಸಹಕರಿಸಿದ್ದೇವೆಂದು ಸಕಾರಾತ್ಮಕರಾಗಿ ಸಮಾಧಾನ ಪಟ್ಟುಕೊಳ್ಳಬೇಕು, ಅಷ್ಟೇ ಅಲ್ಲ `ಬೆಲೆ ಕಟ್ಟಲಾಗದಷ್ಟನ್ನು ಪಡೆಯುತ್ತಿದ್ದೇವೆ’ ಎಂಬುದನ್ನು ಅರಿತುಕೊಳ್ಳಬೇಕು.

ಹಾಗಾದರೆ ಏನದು? ಬೆೆಲೆ ಕಟ್ಟಲಾಗ ದಷ್ಟನ್ನು ಪಡೆಯುತ್ತಿರುವುದು? ಎಂದರೆ ಕೊರೊನಾ ಲಾಕ್‌ ಡೌನ್‌ನಿಂದಾಗಿ ನಾವೆಲ್ಲಾ ಉತ್ತಮ ಗಾಳಿಯನ್ನೀಗ ಪಡೆಯುತ್ತಿದ್ದೇವೆ ಅರ್ಥಾತ್‌ ಸೇವಿಸುತ್ತಿದ್ದೇವೆ.

ವಾತಾವರಣದ ಗಾಳಿಯ ಗುಣಮಟ್ಟ ವನ್ನು `ಎಕ್ಯೂಐ’ (ಏರ್‌ಕ್ವಾಲಿಟಿ ಇಂಡೆಕ್ಸ್) ಅಂದರೆ `ಗಾಳಿಯ ಗುಣಮಟ್ಟ ಸೂಚ್ಯಂಕ’ ದಲ್ಲಿ ಹೇಳ ಲಾಗುತ್ತದೆ. ಸಾಮಾನ್ಯವಾಗಿ ಇದು 0 ದಿಂದ 50 ರೊಳಗೆ ಇದ್ದರೆ ಉತ್ತಮ, 50 ರಿಂದ 100 ಅಪಾಯಕಾರಿ, 100ನ್ನು ದಾಟುತ್ತಾ ಹೋದಂತೆ ತೀರಾ ಅಪಾಯಕಾರಿ. ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಆದರೆ ಇದಂತೂ ಸತ್ಯ.ನಮ್ಮ ದೇಶದಲ್ಲಿ ಈ ಎಕ್ಯೂಐ ಎಲ್ಲಿಗೆ ಹೋಗಿತ್ತು ಗೊತ್ತಾ, ದಾವಣಗೆರೆ ನಗರದಲ್ಲಿ ಇದು 100 ನ್ನು ಸಮೀಪಿಸಿತ್ತು. ಬೆಂಗಳೂರಲ್ಲಿ 130 ಕ್ಕೆ ಹೋಗಿತ್ತು. ಹೈದರಾಬಾದ್‌ನಲ್ಲಿ 161 ಕ್ಕೆ, ಕಾನ್‌ಪುರದಲ್ಲಿ 369 ಕ್ಕೆ, ದೆಹಲಿಯ
ಅಂಟ್ ನಲ್ಲಿ 999ಕ್ಕೆ ಹೋಗಿತ್ತು!! ಹೀಗಾಗಿ ದೆಹಲಿಯಲ್ಲಿ ಕೊರೊನಾ ಬರುವುದಕ್ಕಿಂತಾ ತೀರ ಮೊದಲೇ ಮಾಸ್ಕ್‌ ಅನಿವಾರ್ಯವಾಗಿತ್ತು.

ಆದರೀಗ ಕೊರೊನಾ ಲಾಕ್‌ಡೌನ್‌ ನಿಂದಾಗಿ ವಾಹನ ಸಂಚಾರ, ಕಾರ್ಖಾನೆ ಮುಂತಾದವುಗಳು ಸ್ಥಗಿತಗೊಂಡಿದ್ದರ ಪರಿ ಣಾಮ, ಇಡೀ ದೇಶದಲ್ಲಿನ ವಾತಾವರಣದ ಗಾಳಿ ಸಾಕಷ್ಟು ಶುದ್ಧವಾಗಿದೆ ಎಂದು ಸಂಬಂಧಿಸಿದ ವಿಜ್ಞಾನಿಗಳೇ ಅಂಕಿ-ಅಂಶಗಳ ಸಹಿತ ಹೇಳಿದ್ದಾರೆ. ದೆಹಲಿ ಅಂಟ್‌ನಲ್ಲಿ `ಎಕ್ಯೂಐ’ 999 ಕ್ಕೆ ಹೋಗಿದ್ದು, ಈಗ ದೆಹಲಿಯಲ್ಲಿ 53 ಕ್ಕೆ ಬಂದಿದೆ! ಅಹಮದಾಬಾದ್‌ನಲ್ಲಿ 58, ಮುಂಬೈನಲ್ಲಿ 114, ಪುಣೆಯಲ್ಲಿ 64 ಹಾಗೂ ಬೆಂಗಳೂರಲ್ಲಿ 102 ಕ್ಕೆ ಬಂದಿದೆ. ಅದೇ ರೀತಿ ಅಪಾಯಕಾರಿ ನೈಟ್ರೋಜನ್ ಆಕ್ಸೈಡ್‌ ಪ್ರಮಾಣವೂ ಸಹಾ ಇಳಿಕೆಯಾಗಿದೆ.

 ಶುದ್ಧ ಗಾಳಿಯ ಸೇವನೆಯಿಂದಾಗಿ ದೇಶದ ಜನರ ಆರೋಗ್ಯ ಸುಧಾರಿಸಿದೆ. ಶ್ವಾಸಕೋಶದ ತೊಂದರೆಗಳು, ಅಲರ್ಜಿಗಳು ಕಡಿಮೆಯಾಗಿವೆ, ಇದರಿಂದಾಗಿ ಕೊರೊನಾ ಎದುರಿಸಲು ದೇಹ ಇನ್ನಷ್ಟು ಸಶಕ್ತವಾಗಿದೆ. ಹೀಗೆ ಉತ್ತಮ ಗಾಳಿ ಪಡೆಯುವಂತಾಯಿತಲ್ಲ. ಇದು ಬೆಲೆಕಟ್ಟಲಾಗದ್ದು. ಹಾಗಂತ ಕೊರೊನಾ ಲಾಕ್‌ಡೌನ್‌ ಶಾಶ್ವತವಾಗಲಿ ಎಂದು ಅಭಿಪ್ರಾಯವಲ್ಲ, ಆದರೆ ಲಾಕ್‌ಡೌನ್‌ನಿಂದಾಗಿ ಕಳೆದುಕೊಂಡದ್ದನ್ನೇ ಲೆಕ್ಕ ಹಾಕಿ ಚಿಂತೆ ಪಡುವ ಬದಲು ಗಳಿಸಿದ್ದನ್ನೂ ತಿಳಿದು ಸಮಾಧಾನ ಪಟ್ಟುಕೊಳ್ಳುವುದು ಕ್ಷೇಮ. ಲಾಕ್‌ಡೌನ್‌ ನಿಂದಾಗಿ ಇನ್ನೂ ಏನೇನು ಗಳಿಸಿದ್ದೇವೆಂದು ಮುಂದಿನ ಲೇಖನದಲ್ಲಿ ಹೇಳುವೆ.


ಹೆಚ್‌.ಬಿ. ಮಂಜುನಾಥ, ಹಿರಿಯ ಪತ್ರಕರ್ತ

error: Content is protected !!