ಭಾರತೀಯ ಸಂಸ್ಕೃತಿಯಲ್ಲಿ ದೇದೀಪ್ಯ ಮಾನವಾಗಿ ಕಂಗೊಳಿಸುವ ಚೆಂಬೆಳಕು ತಾಯಿ. ಬಾಳನ್ನು ಒಡೆಯದಂತೆ ಕಾಪಾಡಿ, ಪರಸ್ಪರ ಮಕ್ಕಳನ್ನು ಒಂದಾಗಿಸಿ, ಬದುಕಿನಲ್ಲಿ ಉತ್ಸಾಹ, ಉತ್ಸವಗಳನ್ನು ಹುಟ್ಟಿಸಿ, ಮನೆತನಕ್ಕೆ ಧಕ್ಕೆಯಾಗದಂತೆ ಜಾಗ್ರತೆ ವಹಿಸುವ ದಿವ್ಯ ಶಕ್ತಿಯೇ ತಾಯಿ. ತಾಯಿಯು ತೋರಿದ ಬೀಸಣಿಗೆಯ ಸೌಂದರ್ಯಕ್ಕೆ ಜಗತ್ತು ಬೆರಗಾಗುತ್ತದೆ.
ಬದುಕಿನ ಹೋರಾಟದಲ್ಲಿಯೇ ಮುಳುಗಿದ್ದರೂ, ತಾಯಿಯ ನುಡಿಯಿಂದ ದೂರದಲ್ಲಿರುವವರು ಜೀವನದ ಹತ್ತಿರಕ್ಕೆ ಬರುತ್ತೇವೆ; ಗೌರವಿಸುತ್ತೇವೆ; ತಾಯಿಯ ಪ್ರೇಮ ಬದುಕಿನ ನಿರ್ಮಲವಾದ ಆನಂದ ನಮ್ಮ ಮನವನ್ನು ಹೊಂಬೆಳಕಂತೆ ಮೊಳಗಿ ಬೆಳಗುತ್ತದೆ. ಈ ವಾತ್ಸಲ್ಯ, ಬದುಕಿನ ವಿವಿಧತೆಯನ್ನು ಆರ್ದ್ರ ಗೊಳಿಸಿ ಅಲೌಕಿಕವೆನ್ನುವಂತೆ ಮೆರೆಸಿ; ಸಂಸಾರ ವನ್ನು ಸಾರವತ್ತಾಗಿ ಮುನ್ನಡೆಯುವಂತೆ ಕೈಗೊಳ್ಳು ವುದೇ ಹೆತ್ತವ್ವನ ಒಡಲ-ಮಡಿಲ ಚಿತ್ರ ವೃತ್ತಿ.
ಜೀವನದ ವಿವಿಧ ವ್ಯಾಪಾರಗಳಲ್ಲಿ ಹಿಂದೆ ಬೀಳದೆ, ಸಮಾಜದ ವಿಸ್ತರತೆಯಲ್ಲಿ ಸಂದರ್ಭಗಳಿಗ ನುಗುಣವಾಗಿ ಪೂರಕಗಳನ್ನು ಪೋಷಣೆ ಮಾಡುತ್ತಾ ಇದರೊಂದಿಗೆ ಅಪತ್ಯದೋಹದ (Tender grace), ಅಪತ್ಯ ಜನನ, ಅಪತ್ಯೋತ್ಸವ, ಬಯಕೆಯ ಪರಿತಪಿಸುವಿಕೆ, ಅದಕ್ಕಾಗಿ ವ್ರತ ನಿಯಮಗಳನ್ನು ಮಾಡುವ ಮಡಿಲಮ್ಮಂದಿರು ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತಾರೆ. ಪ್ರಖ್ಯಾತ ವ್ಯಕ್ತಿಗಳ ಜನನಕ್ಕೆ ತಾಯಿ-ತಂದೆಗಳ ವ್ರತ ನಿಯಮ ಗಳು ಕಾರಣವಾಗಿರುವ ಸಂಗತಿಗಳನ್ನು ಕಾಣಬಹುದು.
ಜಗತ್ತಿನಲ್ಲಿ ಮಹಾನುಭಾವರು ನಾಯಕರಾ ಗುವುದಕ್ಕೆ ಅವರ ಜನನ ಹಾಗೂ ಶೈಶವಗಳು ಇನ್ನಷ್ಟು ವಿಶೇಷತೆಗಳನ್ನು ಪಡೆಯುತ್ತಿರುವುದು. ಮಗುವಿನ ಕ್ರಿಯೆ-ಪ್ರತಿಕ್ರಿಯೆ, ನಗು-ಅಳು, ನೋಟ-ಮಿಸುಕಾಟ, ರೂಪಕಗಳಂತೆ ಮಕ್ಕಳು ಶಕ್ತಿ, ಸಾಮರ್ಥ್ಯ, ವೇಷ, ಆಡಂಬರ ಇತ್ಯಾದಿಗಳಿಗೆ ತಾಯಿಯೇ ಕೇಂದ್ರ ಬಿಂದು.
ಮರಣ ವೃಕ್ಷದಲ್ಲಿ `ಯೇಸು’ ತನ್ನ ತಾಯಿಗೆ ಶಿಷ್ಯ ಜಾನನು ಇನ್ನು ಮುಂದೆ ನಿನಗೆ ಮಗ ಎಂದು ತಾಯಿ `ಮೇರಿಯಮ್ಮ’ನಿಗೆ ಹೇಳಿ ಮಾತೃ ಋಣವನ್ನು ಸಲ್ಲಿಸಲು ಮರೆಯಲಿಲ್ಲ. ಸೆರೆವಾಸದಲ್ಲಿ (Solitary Confinment) ಯೂ ವಿಕಾಸದ ಅಂತರಂಗ ಮಾತೃದು ತಾನಂದನೆಂದು `ಖಲೀಲ್ ಗಿಬ್ರಾನ್’ ಜನನಿಯಾದ `ಕಮಲಾ ರಾಹ್ನಿ’ಯನ್ನು ಸಂಸ್ಮರಣೆ (Commemoratise) ಗೈಯ್ಯುತ್ತಾನೆ. ಖಗೋಳ ತಜ್ಞ `ಗೆಲಿಲಿಯೋ’ ತನ್ನನ್ನು ಹೆತ್ತ ಹೊಕ್ಕಳ ಬಳ್ಳಿ (umbilical cord)ಯಿಂದಲೇ ಸೂರ್ಯ ಕೇಂದ್ರ ಸಿದ್ಧಾಂತವನ್ನು ಮಂಡಿಸಿದ. `ಶಂಕರಾಚಾರ್ಯ’ರು ತಾಯಿ `ಆರ್ಯಾಂಬಾ ಳಿಂದಲೇ’ ಅದ್ವೈತ ಸಿದ್ಧಾಂತ ಸಂಸ್ಥಾಪಕರಾದರು. `ಶ್ರೀ ರಮಣರ’ ನೈಸರ್ಗಿಕ ಮಾಂತ್ರಿಕತೆಗೆ ತಾಯಿ `ಅಳಗಮ್ಮನ’ನವರೇ ಸಾರ ಸರ್ವಸ್ವರಾದರು. ಶ್ರೀ ರಾಮಕೃಷ್ಣರ ಮೌನಂತಸ್ತಿಗೆ `ಚಂದ್ರಾದೇವಿಯೇ’ ಕಾರಣರಾದರು.
`ನರೇಂದ್ರ ದತ್ತ’ರಿಗೆ ಮೌನ ಮತ್ತು ಏಕಾಂತ ಅಂತರ್ಮುಖಿಯಾಗಲು ತಾಯಿ ಭುವನೇಶ್ವರಿಯು ಪರಮಾತ್ಕೃಷ್ಟರಾದರು. ಸೂಕ್ಷ್ಮ ಸಂದಿಗ್ಧತೆಯ ಪರಿಕಲ್ಪನಾ ಜ್ಞಾನಕ್ಕೆ ಜನನಿಯೇ ಕನ್ನಡಿ ಎಂದು `ರವೀಂದ್ರನಾಥ್ ಠಾಗೂರ್’ ತಮ್ಮ `ಗೀತಾಂಜಲಿ’ಯಲ್ಲಿ ವ್ಯಕ್ತಪಡಿಸಿದ್ದಾರೆ. ವರಕವಿ `ದಾ.ರಾ. ಬೇಂದ್ರೆ’ ಯವರು ವಿಶ್ವಮಾತೆ, ಭೂಮಾತೆ, ಭರತಮಾತೆ, ಕನ್ನಡದ ತಾಯಿ, ಜನ್ಮ ಕೊಟ್ಟ ತಾಯಿ. ಈ ಐದು ಐದೆಯರ ಪಂಚಪ್ರಾಣಗಳಾಗಿ ಈ ಜೀವನ ದೇಹನಿಹನು’ ಎಂದು ಕೃತಜ್ಞರಾದರು.
`ಕಾಡಿನ ಕೊಳಲಿದು ಕಾಡಕ ವಿನಾಂ ನಾಡಿನ ಜನರೊಲಿದಾಲಿಪುದು’ ಎಂಬ ಮಾನ್ಯತೆಗೆ ತಾಯಿ ಸೀತಮ್ಮನ ಸಂಪೂರ್ಣ ಮಮತಾ ಸಂಪತ್ತೇ ಗವಚವಾಯಿತೆಂದರು ಕುವೆಂಪುರವರು.
ತನ್ನನ್ನು ಹೆತ್ತು ಬೆಳೆಸಿದ ತಾಯಿಯ ನೆನಪು ನಿಗೂಢವಾಗಿ, ಆಪ್ತವಾಗಿ ಮನಸ್ಸನ್ನು ಆವರಿಸಿದೆ. ನಮ್ಮನ್ನು ಹೊತ್ತು ಹೆತ್ತು ಕೆಮ್ಮಿ ಸಣ್ಣಾದವಳು. ಒಳಗೇ ಸವೆದು ಮಣ್ಣಾದವಳು, ಅವಳ ಪಾಲಿಗೆ ನಾವೇ ಚಿನ್ನಾ ರನ್ನಾ, ಎಂಥ ಬಡತನದಲ್ಲೂ ಕಡಿಮೆ ಯಾಗದಂತೆ ಮಮತೆಯ ಅನ್ನವನ್ನು ಉಣಿಸಿದ ವಳು. ತಾಯಿ ತಾಯಿ ಬೇರಿನಂತೆ ನೆನಪಿನಲ್ಲಿ ಹಸಿರಾಗಿದ್ದಾಳೆ; ಎಷ್ಟು ಸೊಗಸಾದ ಚಿತ್ರ! ಆಡುಮಾತಿನ ನುಡಿ ಗಂಗಾಧರ ಚಿತ್ತಾಲರದು.
ವೈಚಾರಿಕತೆಯ `ಆಧುನಿಕ ಮನುಷ್ಯನನ್ನು ಪ್ರತಿಪಾದಿಸುವಲ್ಲಿ ಸ್ವಲ್ಪ ವಿನಯ, ಮೌನವಿದ್ದರೆ ಅದಕ್ಕೆ ಕಾರಣ ತಾಯಂದಿರು. ಜಿ.ಎಸ್.ಎಸ್.ರವರ ಬದುಕಿನಲ್ಲಿ ಬಂದಡರಿದ ಆಕಸ್ಮಿಕ ಅವಗಢಗಳ ದವಡೆಯಿಂದ ಪಾರಾದುದು ತಾಯಿಯಿಂದ. ಕಂಡ ಕಂಡ ಹೆಣ್ಣಿನ ಮುಖಗಳಲ್ಲಿ ಮಾತೃರೂಪ ಸ್ವಭಾವೋಕ್ತಿಯ ರೂಪಾಂತರವಾಯಿತು ಎಂದರು.
ಮಗುವಿನ ಶೈಶವ, ಬಾಲ್ಯಗಳಲ್ಲಿ ತಾಯಂದಿರ ಪರಿಶುದ್ಧ ಪ್ರೀತಿಯನ್ನು ಕಂಡರಿಯದ ಮಕ್ಕಳು ದುಷ್ಟರೂ, ಭ್ರಷ್ಟರೂ, ಕ್ರೂರಿಗಳು ಆಗುತ್ತಾರೆಂದು, ಸ್ವಪ್ರಯತ್ನದಿಂದ ಸರ್ವತೋಮುಖ ಏಳಿಗೆಗೆ ಕಾರಣ ಕಾರಳೆಂದು, ಕೆನಡಾದ ಪ್ರಸಿದ್ಧ ವೈದ್ಯ `ಡಾ. ವಿಲಿಯಂ ಬಸ್ಲರ್’ ಉದ್ಗರಿಸಿದರು.
ಗ್ರಾಮೀಣ ಬದುಕೆಲ್ಲ ಬಹುವಾಗಿ ಧೀರೋ ದಾತ್ತ ತಾಯಂದಿರಿಂದಲೇ ತುಂಬಿದೆ. ಸತ್ತವನ ನೆತ್ತಿ ಕಾಯುವ ತಾಯಿ, ಗಾಢ ನೆನಪಾಗಿ ಇಂದಿಗೂ ಉಳಿದಿದ್ದಾಳೆ. ಬದುಕನ್ನು ಗಂಧದಂತೆ ತೇಯ್ದು ಗಂಧವತಿಯಾಗಿದ್ದಾಳೆ. ಸಂಸಾರದ ನೊಗ ಭಾರಕ್ಕೆ ಹೆಗಲು ಕೊಟ್ಟವಳು; ಗಂಡ ಮಾಡಿದ ಸಾಲದ ಕಾಸು ಕಾಸನ್ನು ತೀರಿಸಿ ಬಡ್ಡಿಯ ನೊಗ ಭಾರ ಇಳಿಸಿದವಳು; ಕಣ್ಣಿಗೂಟವ ಕಿತ್ತು ಕೆಚ್ಚಲೂಡುವ ತವಕ’, ಇಂತ ನಿಚ್ಚಳದ ನಿಸೂರು ಬದುಕಿನ, ನೆರಿಗೆ ಮಾಸದ ದಣಿವಿನ ಏಳು ಮಕ್ಕಳ ತಾಯಿ ತೆಳ್ಳಗೇ ನಕ್ಕ ವ್ಯಕ್ತಿತ್ವವನ್ನು ಬಗೆಬಗೆಯ ಮಾತುಗಳಲ್ಲಿ ಬಣ್ಣಿಸಿದ್ದಾರೆ ಪ್ರೊ. ಎಸ್.ಜಿ. ಸಿದ್ಧರಾಮಯ್ಯನವರು.
ಎಲ್ಲರಿಗೂ ತಿಳಿದಿರುವಂತೆ ಜಗತ್ತಿನಲ್ಲಿ ಎಲ್ಲಾ ಮಕ್ಕಳು ಹೆಚ್ಚಾಗಿ ಅಮ್ಮಂದಿರೊಂದಿಗೆ ಬೆಳೆದಿರುತ್ತಾರೆ. ಹುಸಿ ಮುನಿಸುಗಳನ್ನು ಮೇಲಿಂದ ಮೇಲೆ ನೋಡಿರುತ್ತಾರೆ. ಹಾಗಾಗಿ ನಮ್ಮ ಅಮ್ಮ ಏನು ಅಂತ ನನಗೆ ಚೆನ್ನಾಗಿ ಗೊತ್ತಿದೆ ಎಂದು ನಂಬಿರುತ್ತಾರೆ. ಆದರೆ ಅಂಥ ಅಮ್ಮ ಕೂಡ ಒಂದೆರಡಲ್ಲ, ಹತ್ತಾರು ಗುಟ್ಟುಗಳನ್ನು ತನ್ನೊಳಗೆ ಉಳಿಸಿಕೊಂಡಿರುತ್ತಾಳೆ. ಮುಂದೊಂದು ದಿನ ಇದು ತಿಳಿದಾಗ ಇದು ನಂಬಿಕೆ ದ್ರೋಹ (Insidious) ವೆನ್ನಿಸಿದರೂ ಕೆಲವೂ ಸಂಗತಿಗಳನ್ನು ತನ್ನಲ್ಲಿಯೇ ಲೀನವಾಗಿಸಿಕೊಂಡು ಆಕೆ ಲೋಕದ ಮಕ್ಕಳಿಗೆ ಒಳಗನ್ನಡಿ, ಪಡಿಗನ್ನಡಿಯಾಗಿ..
ಚಿಲಿ ಪಿಲಿ ಅನ್ನೋದು ಒಂದು ಹಕ್ಕಿ
ಚಿಂತಾಮಣಿ ಅನ್ನೋದು ಒಂದು ಕೆರೆ
ಆ ಕೆರೆ ಹೋದರೆ ಆ ಹಕ್ಕಿಗೆ ಮರಣ ವೆಂಬ ಒಗಟಿ (Riddle) ನಲ್ಲಿ ಹಸಿಯಾಗಿಯೇ ಉಳಿಯುತ್ತಾಳೆ ಮನಕ ಮನ ಕೂಡಿದರೆ ಮನಿಮಾರ ಮಡಿಲೊಡಲಿ ಶಾಸನೋಕ್ತಿ.
ಪ್ರೊ. ಬಾತಿ ಬಸವರಾಜ್
ಶೈಕ್ಷಣಿಕ ಸಲಹೆಗಾರ,
ದವನ ಕಾಲೇಜು, ದಾವಣಗೆರೆ.
88845 27130