ಜಾಗೃತ ಮನಸ್ಸು…

ಜಾಗೃತ ಮನಸ್ಸು ಸ್ವಾತಂತ್ರ್ಯ ಮತ್ತು ಆಯ್ಕೆ ಎಂಬ ತತ್ವಗಳ ಮೇಲೆ ಕೆಲಸ ಮಾಡುತ್ತದೆ. ಒಬ್ಬ ವ್ಯಕ್ತಿಗೆ ಅರ್ಥವಾಗುವ ಆಲೋಚನೆಗಳ ಅರಿವಿದ್ದಾಗ ಅದು ತನ್ನ ಮೇಲೆ ಉಂಟು ಮಾಡುವ ಪರಿಣಾಮವೂ ತಿಳಿಯುತ್ತದೆ. ಒಂದು ಆಲೋಚನೆಯು ಸಂವೇದನವಾಗಿ ವಿಸ್ತರಿಸುತ್ತದೆ.ಮತ್ತು ಮುಂದೆ ಅದೇ ಮನೋಭಾವವಾಗಿ ವಿಷಾದವಾಗುತ್ತದೆ. ನಂತರ ಇರುವಿಕೆಯ ಅನುಭವ ತಿಳಿಯುತ್ತದೆ. ಒಂದು ಆಲೋಚನೆಯಿಂದ ಉಂಟಾಗುವ ಹೆದರಿಕೆ ಮತ್ತು ಅದರ ಪರಿಣಾಮ ಅನುಭವಕ್ಕೆ ಬರುತ್ತದೆ. ಆದುದರಿಂದ ಧನಾತ್ಮಕ ಆಲೋಚನೆಯನ್ನು ಆರಿಸಿ ಆಯ್ಕೆ ಮಾಡಿಕೊಳ್ಳುವುದು ವಿವೇಕಯುತವಾಗಿದೆ. ಆಲೋಚನೆಯನ್ನು ಆರಿಸಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಚಲಾಯಿಸಬೇಕು. ಆಲೋಚನೆಗಳ ಬೀಜಗಳಿಂದ ನಿಮ್ಮ ಯೋಚನೆಯಂತೆ ನೀವಾಗುತ್ತೀರಿ. ಇದನ್ನು ಸ್ವಾಮಿ ವಿವೇಕಾನಂದರು ಕೂಡ ಸಮರ್ಥಿಸಿದ್ದಾರೆ. ಪರಿಣಾಮವಿಲ್ಲದ ಆಲೋಚನೆ ಇಲ್ಲ. ಪ್ರತಿಯೊಂದು ಆಲೋಚನೆಗೂ ತನ್ನದೇ ಆದ ಮಿಡಿತ, ಕಂಪನವಿದೆ. 

ಪ್ರತಿಯೊಂದು  ಸಾರಿ ನಾವು ಆಲೋಚಿಸಿ ದಾಗಲೂ ಅದರ ಗುಣಮಟ್ಟ ನಮಗೆ ತಿಳಿಸಿರುತ್ತದೆಯೇ? ಬಹಳಷ್ಟು ಆಲೋಚನೆಗಳು ಧನಾತ್ಮಕವಾದದು ಅಥವಾ ಪ್ರಯೋಜನವಿ ಲ್ಲದವುಗಳಾಗಿರಬಹುದು. ಈ ರೀತಿಯ ಆಲೋಚನೆಗಳ ಬಗ್ಗೆ ಮತ್ತು ಅವುಗಳ ಮಿಡಿತ, ಕಂಪನಗಳ ಬಗ್ಗೆ ನಮಗೆ ಅರಿವಿದ್ದರೆ ಅವುಗಳು ಉತ್ಪತ್ತಿಯನ್ನು ನಿರ್ಬಂಧಿಸುತ್ತಿರಬೇಕು ಹೀಗೆ ಗಮನಿಸುತ್ತಿರುವಾಗ ಋಣಾತ್ಮಕ ಮತ್ತು ಪ್ರಯೋಜನವಿಲ್ಲದ ಆಲೋಚನೆಗಳೆಂಬ ಕಳೆಗಳನ್ನು ಜೀವನದಲ್ಲಿ ಅವುಗಳಿಂದ ಯಾವುದೇ ಉದ್ದೇಶವಿಲ್ಲದೇ ಇರುವುದರಿಂದ ಕಿತ್ತೊಗೆಯಬಹುದು, ಮನುಷ್ಯ ಯೋಚನೆ ಮತ್ತು ಆಲೋಚನೆಗಳ ಒಂದು ಕಂತೆಯಾಗಿದ್ದಾನೆ. ಆಲೋಚನೆಗಳು ಪ್ರಪಂಚವನ್ನು ಆಳುವ ಉಪಾಯಗಳಾಗಿವೆ, ಆಲೋಚನೆಗಳ ನಿರ್ವಹಣೆ ಎಂದರೆ ಸಮಯದ ನಿರ್ವಹಣೆ ಆಗಿದೆ. ಆಲೋಚನೆಗಳು ಸಮಯ ಮತ್ತು ಉಸಿರು ನಮ್ಮ ಜೀವನದ ಅಮೂಲ್ಯವಾದ ನಿಧಿಯಾಗಿವೆ. 

ನಾವು ನಮ್ಮ ಯೋಜನೆಗಳತ್ತ ಗಮನ ಕೇಂದ್ರೀಕರಿಸೋಣ. ನಮ್ಮ ಮನಸ್ಸಿಗೆ ಸರಿಯಾದ ಮಾರ್ಗದರ್ಶನ ನೀಡೋಣ. ಹೀಗೆ ಮಾಡುವುದರಿಂದ ಮನಸ್ಸು ಶುದ್ಧವಾದ, ಶಕ್ತಿಯುತವಾದ ಮತ್ತು ಧನಾತ್ಮಕ ಆಲೋಚನೆ ಗಳನ್ನು ಉತ್ಪತ್ತಿ ಮಾಡುತ್ತದೆ. ಆಲೋಚನೆಯನ್ನು ವಾತ್ಸಲ್ಯವಾಗಿಯೂ ನೀಡಬಹುದು ಮತ್ತು ಸೋಂಕು ರೋಗವಾಗಿಯೂ ನೀಡಬಹುದು. 

ಶಕ್ತಿಯುತವಾದ, ಶುದ್ಧವಾದ ಮತ್ತು ಧನಾತ್ಮಕ ಆಲೋಚನೆಗಳು ಜೀವನದ ನಿಜವಾದ ಸಂಪತ್ತಾಗಿದೆ. ಮನಸ್ಸು ಒಂದು ತುಂಟ ಮಗು ವಿದ್ದಂತೆ ಮಗುವಿನತ್ತ ನಮ್ಮ ಗಮನವಿದ್ದಾಗ ಮಗು ನಮಗೆ ಬೇಕಾದಂತೆ ನಡೆದುಕೊಳ್ಳುತ್ತದೆ. ನಾವು ನಮ್ಮ ಆಲೋಚನೆಗಳ ಅರಿವುಳ್ಳವರಾಗಿರಬೇಕು. ಪ್ರತಿನಿತ್ಯ ಕಡೇ ಪಕ್ಷ ಹದಿನೈದು  ನಿಮಿಷಗಳ ಕಾಲ ನಮ್ಮ ಆಲೋಚನೆಗಳ ಚಲನ-ವಲನವನ್ನು ಗಮನಿಸಬೇಕು. ಹೀಗೆ ಮಾಡುವುದರಿಂದ ಅನವಶ್ಯಕ ಪ್ರಯೋಜನವಿಲ್ಲದ ಮತ್ತು ಋಣಾತ್ಮಕ ಆಲೋಚನೆಗಳನ್ನು ದೂರವಿಡಬಹುದು. ಪ್ರತಿನಿತ್ಯ ಕನಿಷ್ಠ ಹದಿನೈದು ನಿಮಿಷ ಆಲೋಚನೆಗಳ ಚಲನವಲನವನ್ನು ಗಮನಿಸೋಣ. ಈ ಸಮಯವನ್ನೇ ಧ್ಯಾನ ಎನ್ನುವುದು. ನಮ್ಮ ಆಲೋಚನೆಗಳನ್ನು ಗಮನಿಸುವುದರಿಂದ ನಾವು ಅನವಶ್ಯಕವಾದ ಪ್ರಯೋಜನವಿಲ್ಲದ ಮತ್ತು ಋಣಾತ್ಮಕ ಆಲೋಚನೆಗಳನ್ನು ದೂರವಿಡ ಬಹುದು. ನಾವು ಧನಾತ್ಮಕವಾದ, ಆಹ್ಲಾದಕರವಾದ ಮತ್ತು ಶುದ್ಧ ಆಲೋಚನೆಗಳನ್ನು ಇಷ್ಟಪಡುವುದು ಸ್ವಾಭಾವಿಕ. ನಮ್ಮ ಆಲೋಚನೆಗಳಿಂದಲೇ ನಮ್ಮ ಅಸ್ತಿತ್ವ ನಮ್ಮ ಜೀವನದ ಗುಣಮಟ್ಟವು ನಮ್ಮ ಆಲೋಚನೆಗಳ ಗುಣಮಟ್ಟದ ಮಾರ್ಗದರ್ಶನ ದಿಂದ ನಿಯಂತ್ರಿಸಲ್ಪಡುತ್ತದೆ. ನಮ್ಮ ಆಲೋಚನೆಗಳು ಶುದ್ಧವಾಗಿ ಮತ್ತು ಧನಾತ್ಮವಾಗಿದ್ದಲ್ಲಿ ನಮ್ಮ ಅನುಭವ ಮತ್ತು ವ್ಯವಹಾರ ಆಹ್ಲಾದಕರವಾಗಿಯೂ ಮತ್ತು ಶಾಂತಿಯುತವಾಗಿಯೂ ಇರುತ್ತದೆ.


ಎಸ್.ಮರಳಸಿದ್ದೇಶ್ವರ
ಶಿವಪುರ ಹೊಳಲ್ಕೆರೆ.
[email protected]

error: Content is protected !!