ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್-19ಕ್ಕೆ ಲಸಿಕೆಯೊಂದೇ ರಾಮಬಾಣ

2019ರ ಕೊನೆಯಲ್ಲಿ ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್-19 ಮಹಾಮಾರಿಗೆ ಬಲಿಯಾದವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಸಿಕೆಯೊಂದೇ ಇದನ್ನು ತಡೆಗಟ್ಟಲು ಇರುವ ರಾಮಬಾಣವೆಂದು ವಿಜ್ಞಾನಿಗಳು ಹಾಗೂ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

2020ರ ಅಂತ್ಯಕ್ಕೆ ಜಗತ್ತಿನ ವಿವಿಧ ಭಾಗಗಳಲ್ಲಿ ಸುಮಾರು 40 ವಿಭಿನ್ನ ಕಂಪನಿಗಳ ಲಸಿಕೆಗಳು ಮಾನವ ಪ್ರಯೋಗಗಳಲ್ಲಿ ತೊಡಗಿವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸುಮಾರು 150ಕ್ಕೂ ಹೆಚ್ಚು ಲಸಿಕೆಗಳ ಪೂರ್ವಭಾವಿ ಪ್ರಯೋಗಗಳು (preclinical Trial) ನಡೆಯುತ್ತಿವೆ.

ಸಾಮಾನ್ಯವಾಗಿ ಒಂದು ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮುಂಚೆ ಮೂರು ಹಂತದ ಕ್ಲಿನಿಕಲ್ ಪ್ರಯೋಗಗಳು ಮುಗಿದಿರುತ್ತವೆ. ಈ ಹಂತಗಳು ಮುಗಿಯಲಿಕ್ಕೆ ಸುಮಾರು ವರ್ಷಗಳ ಪರಿಶ್ರಮದ ಅಗತ್ಯವಿರುತ್ತದೆ. ಆದರೆ ಸಮಯದ ಅಭಾವ ಹಾಗೂ ತುರ್ತು ಅವಶ್ಯಕತೆಯ ಸಲುವಾಗಿ ಕೋವಿಡ್ ಲಸಿಕೆಯನ್ನು ಕೆಲವೇ ತಿಂಗಳುಗಳಲ್ಲಿ ತಯಾರಿಸಲಾಗಿದೆ. ಅಮೆರಿಕಾ ದೇಶದ FDA (ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್) ಸುರಕ್ಷಾ ಮಾನದಂಡಗಳನ್ನು ಅನುಸರಿಸಿಯೇ ಸದ್ಯಕ್ಕೆ ಲಭ್ಯವಿರುವ ಲಸಿಕೆಗಳನ್ನು ತಯಾರಿಸಲಾಗಿದೆ.

ಭಾರತದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಉಪಯೋಗಿಸಲು ಅನುಮತಿ ನೀಡಲಾಗಿದೆ.

18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಇಂಟ್ರಾಮಸ್ಕುಲರ್ ಇಂಜೆಕ್ಷನ್ ಮೂಲಕ ಕೊಡಲಾಗುವುದು. ಈ ಲಸಿಕೆಗೆ ಮುಂಚೆ ಅಲರ್ಜಿ ಆಗಿದ್ದಲ್ಲಿ, ಈ ಲಸಿಕೆಯ ಯಾವುದಾದರೂ ಪದಾರ್ಥಗಳಿಗೆ ಅಲರ್ಜಿ ಇದ್ದಲ್ಲಿ ಈ ಲಸಿಕೆಯನ್ನು ತೆಗೆದುಕೊಳ್ಳಬಾರದು.

ಲಸಿಕೆಯಿಂದ ಅಡ್ಡ ಪರಿಣಾಮಗಳು:

ಇಂಜೆಕ್ಷನ್ ಜಾಗದಲ್ಲಿ ನೋವು, ಕಡಿತ, ಊತ, ಬಿಸಿಯಾಗುವುದು, ಕೆಂಪಾಗುವುದು, ಆಯಾಸ, ಮೈ ಕೈ ನೋವು, ಜ್ವರ, ಚಳಿ, ವಾಂತಿ/ವಾಕರಿಕೆ, ಫ್ಲೂ ತರಹದ ಲಕ್ಷಣಗಳು, ಅಪರೂಪವಾಗಿ ತಲೆತಿರುಗುವಿಕೆ, ಹೊಟ್ಟೆ ನೋವು, ಬೆವರುವುದು, ಮೈ ಕಡಿತ, ಲಿಂಪ್ ಸೋಡ್ ಊತ ಇತ್ಯಾದಿ ಅಡ್ಡ ಪರಿಣಾಮಗಳು ಕಂಡಲ್ಲಿ ಹತ್ತಿರದ ಆಸ್ಪತ್ರೆಗೆ ಸಂಪರ್ಕಿಸಿ.

ಲಸಿಕೆ ಮುನ್ನ ಈ ಕೆಳಗಿನ ತೊಂದರೆ /ಲಕ್ಷಣಗಳು ಇದ್ದಲ್ಲಿ ನಿಮ್ಮ ವೈದ್ಯರಿಗೆ ತಿಳಿಸಿ.

ನಿಮಗೆ ತೀವ್ರರೂಪದ ಅಲರ್ಜಿ ತೊಂದರೆ, ಜ್ವರ, ಬ್ಲೀಡಿಂಗ್ ಡಿಸಾರ್ಡರ್‌ನಿಂದ ಬಳಲುತ್ತಿ ದ್ದರೆ, ಗರ್ಭಿಣಿ/ಸ್ತನಪಾನ ಮಾಡುತ್ತಿದ್ದಲ್ಲಿ, ಬೇರೆ ಯಾವುದಾದರೂ ಕೊವಿಡ್ ವ್ಯಾಕ್ಸಿನ್ ತೆಗೆದೊಂ ಡಿದ್ದರೆ ವೈದ್ಯರಿಗೆ ತಿಳಿಸುವುದು ಅವಶ್ಯವಾಗಿರುತ್ತದೆ.


ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್-19ಕ್ಕೆ ಲಸಿಕೆಯೊಂದೇ ರಾಮಬಾಣ - Janathavaniಡಾ. ದರ್ಶನ್ ಈಶ್ವರ್, ಐಸಿಯು ಸ್ಪೆಷಲಿಸ್ಟ್
ಬರ್ಟ್ಸ್ ಹೆಲ್ತ್ ಎನ್‌ಹೆಚ್ಎಸ್ ಟ್ರಸ್ಟ್, ಲಂಡನ್
ಇಂಗ್ಲೆಂಡ್., +44 7423027697
[email protected]

error: Content is protected !!