ವಿಶ್ವದಲ್ಲೇ ಅತ್ಯಂತ ಸ್ವಚ್ಛ ಹಂದಿಗಳಿವು…!

ವಿಶ್ವದಲ್ಲೇ ಅತ್ಯಂತ ಸ್ವಚ್ಛ ಹಂದಿಗಳಿವು…!

ವಾಷಿಂಗ್ಟನ್, ಜು. 22 – ಹಂದಿಗಳೆಂದರೆ ಕೆಸರಲ್ಲಿ ಬಿದ್ದು ಉರುಳಾಡುವ ದೃಶ್ಯ ಕಣ್ಣೆದುರು ಬರುವುದು ಸಾಮಾನ್ಯ. ಆದರೆ ಈ ಕಲಿಗಾಲದಲ್ಲಿ ಕಾಲ ಬದಲಾಗಿದೆ. ಹಂದಿಗಳ ಅಂಗಗಳನ್ನು ಮನುಷ್ಯರಿಗೆ ಕಸಿ ಮಾಡುವ ತಂತ್ರಜ್ಞಾನ ಯಶಸ್ಸು ಕೊಂಡಿರುವುದರಿಂದ, ಹಂದಿಗಳನ್ನು ಕಾಣುವ ಪರಿಕಲ್ಪನೆ ವೈಜ್ಞಾನಿಕ ವಲಯದಲ್ಲಂತೂ ಬದಲಾಗಿದೆ.

ಅಮೆರಿಕದ ಬ್ಲೂ ರಿಡ್ಜ್ ಬೆಟ್ಟಗಳಲ್ಲಿರುವ ವಿಶೇಷ ಸಂಶೋಧನಾ ಹಂದಿಗಳ ಫಾರಂನಲ್ಲಿ ಬೆಳೆಸಿದ ಮೊದಲ ಪೀಳಿಗೆಯ ಜೀನ್ ತಿದ್ದುಪಡಿ ಮಾಡಲಾದ ಹಂದಿಗಳ ಅಂಗಗಳನ್ನು ಮಾನವರಿಗೆ ಕಸಿ ಮಾಡಲಾಗಿದೆ. ಈ ಹಂದಿಗಳನ್ನು ಸ್ವಚ್ಛ, ಶುಭ್ರ ವಾತಾವರಣದಲ್ಲಿ ಸಾಕಲಾಗುತ್ತದೆ.

ಈ ಹಂದಿಗಳ ಫಾರಂಗೆ ಪ್ರವೇಶ ಪಡೆಯಬೇಕಾದರೆ ಮೊದಲು ನಿಮ್ಮ ವಾಹನವನ್ನು ಸ್ವಚ್ಛಗೊಳಿಸಿಕೊಳ್ಳಬೇಕು, ಬಟ್ಟೆಗಳನ್ನು ಬದಲಿಸಿ ವೈದ್ಯಕೀಯ ಉಡುಗೆ ಧರಿಸಬೇಕು ಹಾಗೂ ಬೂಟುಗಳನ್ನು ಸೋಂಕು ನಿವಾರಕ ಟಬ್‌ನಲ್ಲಿ ಇಳಿಯುವ ಮೂಲಕ ತೊಳೆದುಕೊಳ್ಳಬೇಕು. ನಂತರವೇ ಎಸಿ ಇರುವ ಹಂದಿಗಳ ತಾಣಕ್ಕೆ ಪ್ರವೇಶಿಸಲು ಅವಕಾಶ.

ರೆವಿವಿಕಾರ್ ಇನ್‌ಕಾರ್ಪೊರೇಷನ್ ಕಳೆದ ದಶಕಗಳಲ್ಲಿ ಈ ಹಂದಿಗಳನ್ನು ಸಾಕುವ ಕಾರ್ಯದಲ್ಲಿ ತೊಡಗಿದೆ. ಈ ಬಗ್ಗೆ ಮಾತನಾಡಿರುವ ಕಂಪನಿಯ ಡೇವಿಡ್ ಅಯೆರೆಸ್, ಈ ಪ್ರಾಣಿಗಳು ಅತ್ಯಮೂಲ್ಯ. ಅತ್ಯಂತ ನಿಖರವಾದ ಜೀನ್ ಬದಲಾವಣೆ ಮೂಲಕ ಕುಲಾಂತರಿ ಹಂದಿಗಳನ್ನು ಬೆಳೆಸಲಾಗುತ್ತಿದೆ. ಇವುಗಳ ಅಂಗಗಳನ್ನು ಮನುಷ್ಯರಿಗೆ ಜೋಡಣೆ ಮಾಡುವ ಮಹತ್ವಾಕಾಂಕ್ಷಿ ಪ್ರಯೋಗ ನಡೆಸಲಾಗಿದೆ ಎಂದಿದ್ದಾರೆ.

ಇಲ್ಲಿಗೆ ಕೆಲವೇ ಕಿಲೋಮೀಟರ್ ದೂರದಲ್ಲಿ ರುವ ವರ್ಜೀನಿಯಾದ ಕ್ರಿಶ್ಚಿಯನ್ಸ್ ಬರ್ಗ್‌ನಲ್ಲಿ ಜೈವಿಕ ಸುರಕ್ಷತೆ ಇನ್ನೂ ಕಠಿಣವಾಗಿದೆ. ಇಲ್ಲಿ ಸಾಕುತ್ತಿರುವ ಹಂದಿಗಳನ್ನು ಮುಂದಿನ ವರ್ಷ ನಡೆಯಲಿರುವ ಪ್ರಾಯೋಗಿಕ ಶಸ್ತ್ರಚಿಕಿತ್ಸೆಗೆ ಪೂರೈ ಸಲಾಗುವುದು. 

ಇಲ್ಲಿರುವ ಅತ್ಯಾಧುನಿಕ ವ್ಯವಸ್ಥೆಯನ್ನು ಪ್ರಪಂಚದ ಬೇರೆ ಯಾವುದೇ ಹಂದಿಗೂಡಿಗೆ ಹೋಲಿಸುವಂತಿಲ್ಲ. ಇದೊಂದು ರೀತಿಯ ಔಷಧ ಉದ್ಯಮದ ಘಟಕದ ರೀತಿಯಲ್ಲಿದೆ. ಆಯ್ದ ಕೆಲವು ಉದ್ಯೋಗಿಗಳು ಮಾತ್ರ ಹಂದಿಗಳಿರುವ ತಾಣಕ್ಕೆ ಪ್ರವೇಶಿಸಲು ಅನುಮತಿ ಪಡೆದಿದ್ದಾರೆ.

ಈ ರಕ್ಷಣಾ ಗೋಡೆಯ ಹಿಂದೆ ವಿಶ್ವದ ಅತ್ಯಂತ ಶುದ್ಧವಾದ ಹಂದಿಗಳಿವೆ. ಈ ಹಂದಿಗಳು ಮನುಷ್ಯರ ಅಗತ್ಯಕ್ಕಿಂತಲೂ ಹೆಚ್ಚು ಶುದ್ಧವಾದ ಗಾಳಿ ಹಾಗೂ ನೀರು ಸೇವಿಸುತ್ತವೆ. ಇವುಗಳಿಗೆ ನೀಡಲಾಗುವ ಆಹಾರವನ್ನು ಸಹ ಸೋಂಕು ಮುಕ್ತಗೊಳಿಸಲಾಗುತ್ತದೆ. ಹಂದಿಗಳಿಗೆ ಯಾವುದೋ ಅನಿರೀಕ್ಷಿತ ಸೋಂಕು ತಗುಲಿ ಮಾನವರಿಗೆ ಅಂಗ ಕಸಿ ಮಾಡುವಾಗ ಸಮಸ್ಯೆ ಆಗಬಾರದು ಎಂದು ಇಷ್ಟೆಲ್ಲಾ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.

ಪರಿಸರ ಹಾಗೂ ಜನರಿಂದ ಹಂದಿಗಳಿಗೆ ಯಾವುದೇ ಸೋಂಕು ಬರಬಾರದು ಎಂದು ನಾವು ರಕ್ಷಣಾ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದು ರೆವಿವಿಕಾರ್‌ನ ಮಾತೃ ಸಂಸ್ಥೆಯಾದ ಯುನೈಟೆಡ್ ತೆರಾಪ್ಯೂಟಿಕ್ಸ್‌ನ ಮಾಥ್ಯೂಸ್ ವಾನ್ಎಶ್ಚ್ ತಿಳಿಸುತ್ತಾರೆ.

ಕ್ಲೋನ್ ಮಾಡಿ ಹಾಗೂ ಮಾನವರ ಅಗತ್ಯಕ್ಕೆ ತಕ್ಕನಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹಂದಿಗಳ ಅಂಗ ಪಡೆಯುವ ಘಟಕವನ್ನು 75 ದಶಲಕ್ಷ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅಮೆರಿಕದ ಆಹಾರ ಔಷಧ ಆಡಳಿತದ (ಎಫ್‌ಡಿಎ) ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಈ ವ್ಯವಸ್ಥೆ ರೂಪಿಸಲಾಗಿದೆ. ಹಂದಿಗಳಿಂದ ಮಾನವರಿಗೆ ಅಂಗ ಕಸಿ ಮಾಡುವ ವಿಧಾನಕ್ಕೆ ಕ್ಸೆನೊಟ್ರಾನ್ಸ್‌ ಪ್ಲಾಂಟೇಷನ್ ಎಂದು ಕರೆಯಲಾಗುತ್ತದೆ.

ಅಮೆರಿಕದಲ್ಲಿ ಸಾವಿರಾರು ಜನರು ಕಸಿಗಾಗಿ ಕಾಯುತ್ತಿದ್ದಾರೆ. ಮನುಷ್ಯರ ಅಂಗಗಳ ಮೂಲಕ ಈ ಬೇಡಿಕೆ ಈಡೇರಿಸಲು ಸಾಧ್ಯವಾಗದು ಎಂದು ಪರಿಣಿತರು ಹೇಳುತ್ತಿದ್ದಾರೆ. ಹೀಗಾಗಿ ಹಂದಿಗಳಿಂದ ಮನುಷ್ಯ ಯೋಗ್ಯವಾದ ಅಂಗಗಳನ್ನು ಬೆಳೆದು ತರುವುದೇ ಸದ್ಯಕ್ಕೆ ಕಂಡುಬರುತ್ತಿರುವ ಪರಿಹಾರ ಮಾರ್ಗವಾಗಿದೆ. 

ಅಮೆರಿಕದಲ್ಲಿ ಸಾವಿರಾರು ಜನರು ಕಸಿಗಾಗಿ ಕಾಯುತ್ತಿದ್ದಾರೆ. ಮನುಷ್ಯರ ಅಂಗಗಳ ಮೂಲಕ ಈ ಬೇಡಿಕೆ ಈಡೇರಿಸಲು ಸಾಧ್ಯವಾಗದು ಎಂದು ಪರಿಣಿತರು ಹೇಳುತ್ತಿದ್ದಾರೆ. ಹೀಗಾಗಿ ಹಂದಿಗಳಿಂದ ಮನುಷ್ಯ ಯೋಗ್ಯವಾದ ಅಂಗಗಳನ್ನು ಬೆಳೆದು ತರುವುದೇ ಸದ್ಯಕ್ಕೆ ಕಂಡುಬರುತ್ತಿರುವ ಪರಿಹಾರ ಮಾರ್ಗವಾಗಿದೆ. 

ಈ ದೆಸೆಯಲ್ಲಿ ದಶಕಗಳಿಂದ ಹಲವಾರು ಕಂಪನಿಗಳು ಪ್ರಯತ್ನ ನಡೆಸುತ್ತಾ ಬಂದಿವೆ. ರೆವಿವಿಕಾರ್, ಇಜೀನಿಸಸ್ ಹಾಗೂ ಮಕಾನಾ ಥೆರಾಪ್ಯೂಟಿಕ್ಸ್ ಅಂತಹ ಕಂಪನಿಗಳಲ್ಲಿ ಸೇರಿವೆ.

ಇದುವರೆಗೂ ಅಮೆರಿಕದಲ್ಲಿ ಮರಣದ ಅಂಚಿನಲ್ಲಿದ್ದ ನಾಲ್ವರಿಗೆ ಅಂಗಗಳನ್ನು ಅಳವಡಿಸುವ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ಶಸ್ತ್ರಚಿಕಿತ್ಸೆಗಳ ಮೂಲಕ ಎರಡು ಹೃದಯ ಹಾಗೂ ಎರಡು ಕಿಡ್ನಿ ಅಳವಡಿಸಲಾಗಿದೆ. ಎರಡು ಹೃದಯ ಹಾಗೂ ಒಂದು ಕಿಡ್ನಿಯನ್ನು ರೆವಿವಿಕಾರ್ ಕಂಪನಿ ಪೂರೈಸಿದೆ. ನಾಲ್ವರು ರೋಗಿಗಳು ಕೆಲವೇ ತಿಂಗಳಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಈ ಶಸ್ತ್ರ ಚಿಕಿತ್ಸೆಗಳಿಂದ ಅಮೂಲ್ಯವಾದ ಮಾಹಿತಿಗಳು ದೊರೆತಿವೆ. ಈ ಹಿನ್ನೆಲೆಯಲ್ಲಿ ಹೆಚ್ಚು ರೋಗ ಪೀಡಿತವಲ್ಲದ ವ್ಯಕ್ತಿಗಳ ಮೇಲೆ ಪ್ರಯೋಗ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.

ದಾನ ಮಾಡಲಾದ ಮಾನವ ದೇಹಗಳ ಮೇಲೆ ನಡೆಸಲಾದ ಪ್ರಯೋಗಗಳನ್ನು ಅಮೇರಿಕಾದ ಎಫ್‌ಡಿಎ ಪರಿಶೀಲಿಸುತ್ತಿದೆ. ಹಂದಿಯ ಅಂಗಗಳನ್ನು ಬಬೂನ್‌ಗಳಲ್ಲಿ ಅಳವಡಿಸಿದ ಪ್ರಯೋಗಗಳ ವಿವರಗಳನ್ನು ಪಡೆಯಲಾಗುತ್ತಿದೆ. ನಂತರ ಮುಂದಿನ ಹೆಜ್ಜೆ ನಿರ್ಧರಿಸಲಾಗುವುದು.

ಇಲ್ಲಿಯವರೆಗೂ ನಡೆಸಲಾಗಿರುವ ಅಧ್ಯಯನಗಳಲ್ಲಿ ಯಾವುದೇ ಗಂಭೀರ ಸಮಸ್ಯೆ ಬಂದಿಲ್ಲ. ಯಾವುದೇ ಅಂಗಗಳು ತಿರಸ್ಕೃತವಾಗಿಲ್ಲ. ಮುಂದಿನ ಎರಡು, ಮೂರು ವರ್ಷಗಳು ಅತ್ಯಂತ ಉತ್ಸಾಹಕರವಾಗಿವೆ ಎಂದು ಅಯೆರೆಸ್ ಹೇಳಿದ್ದಾರೆ.

error: Content is protected !!