ಮಗುವಿಗೆ ಸ್ತನ್ಯಪಾನ ಮಾಡಿಸುವುದು ಪವಿತ್ರ ವ್ರತವಿದ್ದಂತೆ – ಡಾ|| ಬಾಣಪೂರ್‌ಮಠ್‌

ಮಗುವಿಗೆ ಸ್ತನ್ಯಪಾನ ಮಾಡಿಸುವುದು ಪವಿತ್ರ ವ್ರತವಿದ್ದಂತೆ – ಡಾ|| ಬಾಣಪೂರ್‌ಮಠ್‌

ಸ್ತನ್ಯಪಾನವೆನ್ನುವುದು ಪ್ರಕೃತಿದತ್ತವಾದ ಸಹಜ ಪ್ರಕ್ರಿಯೆ. ಇದನ್ನು ಸಕಲ ಪ್ರಾಣಿ ಸಂಕುಲದಲ್ಲಿಯೂ ಸಹಜವಾಗಿಯೇ ನೋಡತ್ತೇವೆ. ಹೆರಿಗೆಯಾದ ಪ್ರತಿ ತಾಯಿಗೂ ಹಾಲು ಉತ್ಪತ್ತಿಯಾಗುತ್ತದೆ, ತಾಯಿ ಮಗುವಿಗೆ ಎದೆ ಹಾಲುಣಿಸುತ್ತಾಳೆ. ಆದರೆ ಇಂದಿನ ಆಧುನಿಕ ಗಣಕೀಕೃತ ಜಗತ್ತಿನಲ್ಲಿ ಸ್ತನ್ಯಪಾನ ಎಂಬ ವಿಷಯವೇ ಅಚ್ಚರಿ ಎಂಬಂತೆ ಆಗಿದೆ. ಇಂದು ಯಶಸ್ವಿ ಸ್ತನ್ಯಪಾನಕ್ಕೆ ತಾಯಂದಿರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಮ್ಮ ಮಗುವಿಗೆ ಎದೆಹಾಲುಣಿಸಲಾಗುತ್ತಿಲ್ಲ ಎಂಬ ನೋವಿನಿಂದ ಕುಗ್ಗುತ್ತಾರೆ.  ಇಂತಹ ಸಮಸ್ಯೆಗಳನ್ನು ನಿವಾರಿಸಲು, ನಿರ್ವಹಿಸಲು ಹಾಗೂ ಸುಲಲಿತವಾಗಿ ಸ್ತನ್ಯಪಾನವನ್ನು ಯಶಸ್ವಿಗೊಳಿಸಲು ಮಕ್ಕಳ ವಿಭಾಗಗಳಲ್ಲಿ ಹೊಸದೊಂದು ಕೇಂದ್ರವನ್ನೇ ತೆರೆಯುವಂತಾಗಿದೆ.

ಮಗುವಿಗೆ ಸ್ತನ್ಯಪಾನ ಮಾಡಿಸುವುದು ಪವಿತ್ರ ವ್ರತವಿದ್ದಂತೆ - ಡಾ|| ಬಾಣಪೂರ್‌ಮಠ್‌ - Janathavaniಡಾ|| ಬಾಣಾಪೂರ್‌ಮಠ್‌ರವರು ದಿ. ಶ್ರೀಮತಿ ಸವ೯ಮಂಗಳ ಹಾಗೂ ಶ್ರೀ ದಿ. ಬಿ.ಎಂ. ರಾಮಲಿಂಗಯ್ಯನವರ ಪುತ್ರರಾಗಿ ಬೆಳಗಾಂನಲ್ಲಿ (21.5.1949)  ಜನಿಸಿದರು. ಡಾ|| ಬಾಣಾಪೂರ್‌ಮಠ್‌ರವರ ಪೂಣ೯ ಹೆಸರು ಚಂದ್ರಶೇಖರಯ್ಯ ರಾಮಲಿಂಗಯ್ಯ ಬಾಣಾಪೂರ್‌ಮಠ್‌ ಎಂದು. ಅವರು ಹುಬ್ಬಳ್ಳಿ ಕೆ.ಎಂ.ಸಿ ಯಲ್ಲಿ ಎಂ.ಬಿ.ಬಿ.ಎಸ್‌ ಮುಗಿಸಿ ದಾವಣಗೆರೆಯಲ್ಲಿ 1974ರಲ್ಲಿ ಪಿಡಿಯಾಟ್ರಿಕ್ಸ್‌ನಲ್ಲಿ ಎಂ.ಡಿ ಮುಗಿಸಿದರು.

ದಾವಣಗೆರೆಯ ಬಾಪೂಜಿ ಮಕ್ಕಳ ಆಸ್ರತ್ರೆಯಲ್ಲಿ ಮಕ್ಕಳ ವೈದ್ಯರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿ, ನಂತರ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಹಾಗೂ ಸಂಶೋಧನಾ ಕೇಂದ್ರದ ನಿದೇ೯ಶಕರಾಗಿಯೂ ಕಾಯ೯ ನಿವ೯ಹಿಸಿದ್ದರು. IYCF (Infant and Young Child feeding counselling) ನಲ್ಲಿ ಪ್ರೆಸಿಡೆಂಟಾಗಿ 2 ವಷ೯ ಕಾರ್ಯ ನಿವ೯ಹಿಸಿ, ಜೊತೆಗೆ ನ್ಯಾಷನಲ್‌ ತರಬೇತು ದಾರರಾಗಿ ಕಾರ್ಯ ನಿವ೯ಹಿಸಿದ್ದಾರೆ. ಇವರು ಕೇವಲ ಆಸ್ಪತ್ರೆಯಲ್ಲಿ ಹಾಗೂ ಕಾಲೇಜಿನಲ್ಲಿ ಕೆಲಸ ಮಾಡದೇ ಸಮಾಜದಲ್ಲಿ ತಳಹದಿ ಯಿಂದ ಕೆಲಸ ಮಾಡಿದವರು. ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಶುಶ್ರೂಷಕಿಯರಿಗೆ ಸ್ತನ್ಯಪಾನದ ಬಗ್ಗೆ ತರಬೇತಿಯನ್ನು ನೀಡಿ, ಶುಶ್ರೂಷಕಿಯರನ್ನು ಒಳ್ಳೆಯ ಆಪ್ತ ಸಮಲೋಚಕಿಯರನ್ನಾಗಿ ಮಾಡಿದರು. ಅದರಲ್ಲೂ ಕೆಲಸದ ವಿಚಾರಕ್ಕೆ ಬಂದರೆ ಶಿಸ್ತಿನ ಸಿಪಾಯಿಯಾಗಿದ್ದರು. 

ಡಾ|| ಬಾಣಾಪೂರ್‌ ಮಠ್‌ರವರ ರೋಗ ನಿರ್ಣ ಯದ ಚತುರತೆಯನ್ನು ಈಗಲೂ ಶುಶ್ರೂಷಕಿಯರು ನೆನೆಸಿಕೊಳ್ಳುತ್ತಾರೆ. ಎದೆ ಹಾಲನ್ನು `ಅಮೃತಕ್ಕೆ ಸಮಾನ’ ಎನ್ನುವ ಇವರು ಯಾವುದೇ ತಾಯಿಗೆ ಎದೆಹಾಲುಣಿ ಸುವಾಗ ತೊಂದರೆಯಾದರೂ ಸಮಸ್ಯೆಯನ್ನು ಪರಿಹರಿಸಿ, ಮಗುವಿಗೆ ಹಾಲುಣಿಸುವಂತೆ ಮನದಟ್ಟು ಮಾಡುತ್ತಿದ್ದರು. ಒಂದು ಪಕ್ಷ ತಾಯಿ ಅಕಾಲಿಕ ಮರಣ ಹೊಂದಿದರೆ ಅಥವಾ ತಾಯಿ ಎದೆಹಾಲುಣಿಸದ ಕ್ಲಿಷ್ಟ ಸಂದಭ೯ದಲ್ಲಿದ್ದರೆ ಮಾತ್ರ ಬೇರೆ ಆಯ್ಕೆ ಯನ್ನು ನೀಡುತ್ತಿದ್ದರು. 6 ತಿಂಗಳು ತುಂಬು ವವರೆಗೂ ಮಗುವಿಗೆ ಕೇವಲ ಎದೆಹಾಲು 6 ತುಂಬಿದ ನಂತರ ಪೂರಕ ಆಹಾರದೊಂದಿಗೆ ಎದೆಹಾಲನ್ನು 2 ವಷ೯ ತುಂಬುವವರೆಗೂ ಮುಂದುವರೆಸಬೇಕೆಂದು ತಾಯಂದಿರಿಗೆ ಮನಮುಟ್ಟುವಂತೆ ಹೇಳುತ್ತಿದ್ದರು.

ಕಾರ್ಯನಿರತ ತಾಯಂದಿರು ಬೇರೆ ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದರೆ ಅಂತಹವರಿಗೂ ಕೂಡ ಎದೆಹಾಲುಣಿಸುವು ದರಲ್ಲಿ ಹಲವಾರು ಆಯ್ಕೆ ನೀಡಿ, ತಾಯಂದಿರ ಆತ್ಮವಿಶ್ವಾಸ ಹೆಚ್ಚಿಸಿ, ಯಶಸ್ವಿ ಯಾಗಿ 6 ತಿಂಗಳ ತನಕ ಕೇವಲ ಎದೆಹಾಲುಣಿಸು ವಂತೆ ಸಿದ್ಧಗೊಳಿಸುತ್ತಿದ್ದರು. ಇನ್ನು ಅವಳಿ- ಜವಳಿ ಅಥವಾ ತ್ರಿವಳಿ ಮಕ್ಕಳು ಜನಿಸಿದಾಗ ಅಂತಹ ತಾಯಂದಿರೊಂದಿಗೆ ಆಪ್ತ ಸಮಾಲೋಚನೆ ನಡೆಸಿ, ಅವರ ಮನಸ್ಸಿನ ಶಕ್ತಿ ಹೆಚ್ಚಿಸಿ, ಮಕ್ಕಳಿಗೆ ಎದೆಹಾಲುಣಿಸಲು  ಸಾಧ್ಯವೆನ್ನುವಂತೆ ಮಾಡುತ್ತಿದ್ದರು. ಕೆಲವು ಮಕ್ಕಳು ಹುಟ್ಟುತ್ತಲೇ ಸೀಳು ತುಟಿ ಹಾಗೂ ಸೀಳು ಅಂಗಳದೊಂದಿಗೆ ಹುಟ್ಟಿರುತ್ತವೆ, ಅಂತಹ ಮಕ್ಕಳಿಗೆ ತಕ್ಷಣ ಆಪರೇಷನ್‌ ಮಾಡಲು ಆಗುವುದಿಲ್ಲ, ಅದಕ್ಕೆ ಮಗುವಿನ ತೂಕ ಹಾಗೂ ವಯಸ್ಸು ಮುಖ್ಯವಾಗುತ್ತದೆ. ಅಂತಹ ತಾಯಂದಿರಿಗೆ ಎದೆಹಾಲುಣಿಸಲು ವಿಶೇಷವಾದ ನೈಪುಣ್ಯತೆಗೆ ಅಣಿಗೊಳಿಸುತ್ತಿದ್ದರು. 

ಆರಂಭದ 3 ದಿನಗಳಲ್ಲಿ ಉತ್ಪತ್ತಿ ಯಾಗುವ ಕೊಲೆಸ್ಟ್ರೋಮ್‌ (ಗೀಬು ಹಾಲು)ನ್ನು ಬಂಗಾರದ ಹನಿಗಳೆಂದು ವಣಿ೯ಸುತ್ತಿ ದ್ದರು, ಹಾಗೆಯೇ ಆ ಹನಿಗಳು ಪ್ರಥಮ ಲಸಿಕೆಯಿದ್ದಂತೆ, ಅದನ್ನು ಯಾವುದೇ ಕಾರಣಕ್ಕೂ ಮಗುವಿಗೆ ಸಿಗದಂತೆ ವಂಚನೆ ಮಾಡಬಾರದೆಂದು ಶುಶ್ರೂಷಕಿಯರಿಗೆ ಕಿವಿಮಾತು ಹೇಳುತ್ತಿದ್ದರು.

ಇನ್ನು ಸ್ತನ್ಯಪಾನ ಸಪ್ತಾಹ ಬಂತೆಂದರೆ ಸರ್‌ ಒಂದು ವಾರದ ಎಲ್ಲಾ ಕಾರ್ಯಕ್ರಮ ಗಳನ್ನು ಮುಂದೆ ನಿಂತು ಮಾಡುತ್ತಿದ್ದರು. ವಿವಿಧ ನಸಿ೯೦ಗ್‌ ಹೋಂ ಶುಶ್ರೂಷಕಿಯರನ್ನು ಕರೆಸಿ, ತರಬೇತಿ ನೀಡುತ್ತಿದ್ದರು.

ಅಂಗನವಾಡಿ, ಆಶಾ ಕಾರ್ಯಕತೆ೯ಯರಿಗೆ ಅವರವರಿಗೆ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಸ್ತನ್ಯಪಾನಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಬಂದರೆ ಯಾವ ರೀತಿ ನಿಭಾಯಿಸಬೇಕು, ಯಾವಾಗ ಬೇರೆ ಕಡೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿಕೊಡಬೇಕು ಎಂಬುದನ್ನು ಮನಮುಟ್ಟುವಂತೆ ತರಬೇತಿ ನೀಡುತ್ತಿದ್ದರು. ಕನಾ೯ಟಕ ಸಕಾ೯ರ ದಾವಣಗೆರೆ ಜಿಲ್ಲೆಯಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆಗಳ ಶುಶ್ರೂಷಕಿಯರನ್ನು ಸ್ತನ್ಯಪಾನದ ತರಬೇತಿಗೆ ಅಣಿಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಾಗ ಅದರಲ್ಲಿ ಸತತವಾಗಿ 2 ವಷ೯ಗಳು ಡಾ|| ಬಾಣಾಪೂರ್‌ಮಠ್ ರವರು ತಮ್ಮನ್ನು ತಾವು ತೊಡಗಿಸಿಕೊಂಡರು.

ಮಗುವಿಗೆ ಸ್ತನ್ಯಪಾನ ಮಾಡಿಸುವುದು ಒಂದು ಪವಿತ್ರ ವ್ರತ ವಿದ್ದಂತೆ ಎಂದು ಹೇಳುತ್ತಿದ್ದುದನ್ನು ಕೇಳಿದರೆ ಸಾಕು ತಾಯಿ- ಮಗುವಿನ ಬಗ್ಗೆ ಅವರಿಗಿದ್ದ ಶ್ರೇಷ್ಠತೆಯ ಪರಿಚಯವಾಗುತ್ತದೆ. 

ಯಾವುದೇ ಕಾರಣಕ್ಕೂ ತಾಯಿಯ ಆತ್ಮವಿಶ್ವಾಸ ಕುಗ್ಗದಂತೆ ಅವರಿಗೆ ಕೌನ್ಸಿಲಿಂಗ್‌ ಮಾಡುತ್ತಿದ್ದರು. ಒಬ್ಬ ಖ್ಯಾತ ಮಕ್ಕಳ ವೈದ್ಯರಾಗಿದ್ದರೂ ಕೂಡ ಯಾವುದೇ ಮನೋತಜ್ಞರಿಗಿಂತ ಕಡಿಮೆ ಇಲ್ಲದ ರೀತಿಯಲ್ಲಿ ಆಪ್ತ ಸಮಾಲೋಚನೆ ಮಾಡುತ್ತಿದ್ದರು. `ವೈದ್ಯೋ ನಾರಾಯಣ ಹರಿ’ ಎಂಬ ನಾಣ್ನುಡಿ ಎಲ್ಲರಿಗೂ ಗೊತ್ತಿರುವಂತೆ. ರೋಗಿಗಳ ಸೇವೆ ಕೂಡ ನಾರಾಯಣನ ಸೇವೆ ಮಾಡಿದಂತೆ ಎಂಬ ತತ್ವವನ್ನು ಪಾಲಿಸುತ್ತಿದ್ದವರು. 

ಡಾ|| ಬಾಣಾಪೂರ್‌ಮಠ್‌ರವರು ಇಂದಿನ ಯುವ ವೈದ್ಯರಿಗೆ  ಮಾದರಿ ಯಾಗಿ ದ್ದಾರೆ. ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಮಾತ್ರ ವೈದ್ಯರಂತೆ, ಆಸ್ಪತ್ರೆಯಿಂದ ಹೊರ ಬಂದರೆ ಒಬ್ಬ ಸಾಧಾರಣ ವ್ಯಕ್ತಿಯಂತೆಯಾಗಿ ರುತ್ತಾರೆ. ಕೆಲಸದಲ್ಲಿರುವ ಕಾರ್ಯದಕ್ಷತೆ, ಕೆಲಸಗಾರರ ಪ್ರಾಮಾಣಿಕ ಕೆಲಸವನ್ನು ಮನತುಂಬಿ ಹೊಗಳುವುದು, ಕೆಲಸದ ಜಾಗ ಗಳಲ್ಲಿ ತೊಂದರೆಯಾದರೆ ಅದರ ಸೂಕ್ಷ್ಮತೆ ಯನ್ನು ತಿಳಿದು ನಿಸ್ಪಕ್ಷಪಾತವಾಗಿ ಸರಿಪಡಿಸುವ ಚಾಕಚಕ್ಯತೆ ನಿಜಕ್ಕೂ ಸ್ಮರಣೀಯ. ಡಾ|| ನಿಮ೯ಲ ಕೇಸರಿ, ಡಾ|| ಜಿ. ಗುರುಪ್ರಸಾದ ಹಾಗೂ  ಡಾ|| ಬಾಣಾಪೂರ್‌ಮಠ್‌ರವರ ಕನಸಾಗಿದ್ದ ಬಾಪೂಜಿ ಹ್ಯೂಮನ್‌ ಮಿಲ್ಕ್‌ ಬ್ಯಾಂಕ್‌ ಈಗ ಆರಂಭವಾಗಿರುವುದು ಇವರೆಲ್ಲರ ಕನಸು ನನಸಾದಂತೆ ಆಗಿದೆ.


ಶ್ರೀಮತಿ ಅನಿತಾ. ಬಿ.
ಲ್ಯಾಕ್ಟಿಷಿನಲ್  ಕೌನ್ಸಿಲರ್‌,
ಬಾಪೂಜಿ ಹ್ಯೂಮನ್‌ ಮಿಲ್ಕ್‌ ಬ್ಯಾಂಕ್.
ದಾವಣಗೆರೆ.
[email protected]

error: Content is protected !!