ದಾವಣಗೆರೆಯಿಂದ ಸುಮಾರು 18 ಕಿ. ಮೀ. ದೂರದಲ್ಲಿರುವ ಲೋಕಿಕೆರೆ ಗ್ರಾಮದ ಬಗ್ಗೆ ಈಗಾಗಲೇ ದಿನಕ್ಕೊಂದರಂತೆ ಹಲವಾರು ರೀತಿಯ ಕತೆಗಳು ಜನರ ಬಾಯಿಂದ ಬಾಯಿಗೆ ಬರತೊಡಗಿವೆ. ಈ ಊರಿಗೆ ಇಷ್ಟರಲ್ಲಿಯೇ ಪವಾಡ ಸದೃಶವೆಂಬಂತೆ ಪವಾಡ ನಾಯಕಿಯ ಆಗಮನವಾಗಲಿದ್ದು, ಅದೇ ಆ ದೇವಿಯ ಮೂರ್ತಿ ಪ್ರತಿಷ್ಠಾಪನೆಗೆ ದಿನಾಂಕ ನಿಗದಿಯಾಗಿದೆ.
ಈ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಯಾಗುತ್ತಿ ರುವ ಶ್ರೀ ಲೋಕನಾಯಕಿ ವಿಜಯದುರ್ಗ ಪರಮೇಶ್ವರಿ ಆರಂಭದಲ್ಲಿಯೇ ಬಹಳಷ್ಟು ಪವಾಡಗಳನ್ನು ತನ್ನ ಭಕ್ತ ಸಮೂಹಕ್ಕೆ ತೋರಿಸಿಬಿಟ್ಟಿದ್ದಾಳೆ. ಈ ದೇವಿಯ ಮೂರ್ತಿ ಇಲ್ಲಿ ಪ್ರತಿಷ್ಠಾಪನೆಗೆ ಮೂಲಕಾರಣ ಜಿಲ್ಲೆಯ ಕತ್ತಲಗೆರೆ ಗ್ರಾಮದವರೇ ಆದ ಸೊಪ್ಪಿನ ತಿಪ್ಪಣ್ಣ.
ಕತ್ತಲಗೆರೆ ಗ್ರಾಮದ ದಿವಂಗತ ಸೊಪ್ಪಿನ ಹನುಮಂತಪ್ಪ ಮತ್ತು ಶ್ರೀಮತಿ ಸಿದ್ದಲಿಂಗಮ್ಮ ದಂಪತಿಯ ಪಂಚಮ ಪುತ್ರರಾಗಿರುವ ಸೊಪ್ಪಿನ ತಿಪ್ಪಣ್ಣನವರು ತಮ್ಮ ಗುರುಗಳಾದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಶ್ರೀ ದಿನೇಶ್ ಗುರೂಜಿಯವರ ಮಾರ್ಗದರ್ಶನದಲ್ಲಿ ಈ ದೇವಾಲಯ ನಿರ್ಮಿಸುತ್ತಿದ್ದಾರೆ.
ಈ ಮೂರ್ತಿಯ ಇತಿಹಾಸ ಬಹು ದೊಡ್ಡದಾಗಿದ್ದು, ಪವಾಡ ಸೃಷ್ಠಿಸಿರುವ ಈ ಲೋಕನಾಯಕಿ ವಿಜಯದುರ್ಗ ಪರಮೇಶ್ವರಿ ಮೂರ್ತಿಯನ್ನು ಕೆತ್ತಿರುವ ಶಿಲ್ಪಿಗಳು
ಅದನ್ನು ಬೆಂಗಳೂರಿನ ನೆಲಮಂಗಲದ ಬೂದಿಹಾಳ್ ಗ್ರಾಮದಲ್ಲಿ ಸುಮಾರು 50 ಎಕರೆ ಜಮೀನಿನಲ್ಲಿ 2019ರಲ್ಲಿ 101 ಹೋಮಕುಂಡದ ಮೂಲಕ 1500 ಜನ ಪುರೋಹಿತರೊಂದಿಗೆ, ದಿನೇಶ್ ಗುರೂಜಿಯವರ ಸಾರಥ್ಯದಲ್ಲಿ ಆಯಾತ ಚಂಡಿ ಮಹಾಯಾಗದ ಮೂಲಕ ಪ್ರತಿಷ್ಠಾಪನೆಗೆ ಸಿದ್ದ ಮಾಡಲಾಗಿತ್ತು.
ಈ ಮೂರ್ತಿಗೆ ಮಹಾಯಾಗದ ಪೂಜೆ ಯಂತೂ ನಡೆಯಿತು. ದೇವಸ್ಥಾನವಿಲ್ಲದೆ, ದೇವಸ್ಥಾನ ನಿರ್ಮಾಣಕ್ಕೆ ಯೋಚಿಸಿದ ಭಕ್ತವೃಂದ ಮೂರ್ತಿಯನ್ನು ಕಾರ್ಕಳಕ್ಕೆ ಕಳಿಸಿಕೊಡಲಾಗಿತ್ತು. ಆದರೆ, ಮೂರ್ತಿಯು ಆ ಸ್ಥಳದಲ್ಲಿ ಇರದೇ ಪೂಜಾ ಯಾಗ ಮಾಡಿದ ಪೂಜೆ ನೆರವೇರಿಸಿದವರ ಮನೆಗೆ ಅಂದರೆ ರಾಜರಾಜೇಶ್ವರಿ ನಗರದ ಸೊಪ್ಪಿನ ತಿಪ್ಪಣ್ಣನವರ ಮನೆಗೆ ಶಿಲ್ಪಿಗಳೇ ತಂದು ಇರಿಸಿದರು.ಈ ಮೂರ್ತಿಯ ಪ್ರತಿಷ್ಠಾಪನೆಗೆ ಅನೇಕ ರೀತಿಯ ಸಮಸ್ಯೆಗಳು ಉದ್ಭವವಾಗಿ ವಿಧಿಯಿಲ್ಲದೇ ದೇವಿಯ ಮೂರ್ತಿಯನ್ನು ಸಿದ್ಧವಾಗಿದ್ದ ದೇವಸ್ಥಾನವೊಂದರಲ್ಲಿ ಪ್ರತಿಷ್ಠಾಪನೆ ಮಾಡಲು ತಿರುಪತಿಯ ಭಕ್ತರು ನಿರ್ಧರಿಸಿ, ಸ್ಥಳಾಂತರ ಮಾಡುವ ಸಮಯದಲ್ಲಿ ಮಹಾಮಾತೆ ಹೊಸಕೋಟೆಯ ಬಳಿ ಮುಂದಕ್ಕೆ ಚಲಿಸದೇ, ಅಲ್ಲಿಯೇ ನಿಂತು ಬಿಟ್ಟಳು. ಇದರ ಬಗ್ಗೆ ಚರ್ಚೆಗೆ ಬಿದ್ದ ಭಕ್ತ ಸಮೂಹ, ಎಲ್ಲಿಗೆ ಮೂರ್ತಿಯನ್ನು ಕಳಿಸುವುದು ಎಂದು ಚಿಂತಿಸುತ್ತಿದ್ದಾಗ, ಆನೇಕಲ್, ತಿರುಪತಿ ಮತ್ತಿತರೆ ಕಡೆಯವರು ತಮ್ಮ ಊರಿಗೆ ತೆಗೆದುಕೊಂಡು ಹೋಗಲು ಮತ್ತೆ ಯತ್ನಿಸಿದಾಗ ವಿಧಿಯಿಲ್ಲದೇ ಚೀಟಿ ಎತ್ತಿದಾಗ ಅದು ಕತ್ತಲಗೆರೆಯ ತಿಪ್ಪಣ್ಣನವರಿಗೆ ಒಲಿದುಬಂದಿದೆ.
ಗ್ರಾಮದಲ್ಲಿ ಪ್ರತಿಷ್ಠಾಪನೆಗೊಳ್ಳುವ ಈ ಮೂರ್ತಿ ಈ ಮೊದಲು ಬೆಂಗಳೂರಿನ ತಿಪ್ಪಣ್ಣನವರ ಪುಟ್ಟ ಮನೆಯಲ್ಲಿ ಒಂದೂವರೆ ವರ್ಷಗಳ ಕಾಲ ನೆಲೆಸಿದ್ದು, ಇದೀಗ ಲೋಕಿಕೆರೆ ಗ್ರಾಮದಲ್ಲಿ ನಿರ್ಮಾಣವಾಗಿ ಅಂತಿಮ ಹಂತದಲ್ಲಿರುವ ತ್ರಿಕೂಟಾಚಲ ಮಂದಿರದಲ್ಲಿ ಪ್ರತಿಷ್ಠಾಪನೆಗಾಗಿ ಸಿದ್ಧವಾಗಿದ್ದಾಳೆ. ದೇವಸ್ಥಾನ ಕಾರ್ಯ ಭರದಿಂದ ಸಾಗಿದೆ.
ದೇವಸ್ಥಾನದಲ್ಲಿ ಅರ್ಧನಾರೀಶ್ವರ ಮೂರ್ತಿ, ಆಂಜನೇಯ ಮೂರ್ತಿ, ಮಹಾಗಣಪತಿ ಮೂರ್ತಿಗ ಳಲ್ಲದೇ ಶ್ರೀ ಲಕ್ಷ್ಮೀನಾರಾಯಣನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬೇಕೆಂದು ತಿಪ್ಪಣ್ಣ ಸಂಕಲ್ಪ ಮಾಡಿಕೊಂಡಿದ್ದಾರೆ. ಇತಿಹಾಸ ದಲ್ಲಿ ಲೋಕಿಕೆರೆಗೆ ಹೊಯ್ಸಳರ ಕಾಲದಿಂದಲೂ ಮಹಾ ಕೊಡುಗೆ ಇದ್ದು, ಹಲವಾರು ಕೆರೆಗಳ ಹೆಸರುಗಳು ಈ ಊರಿನ ಆಜುಬಾಜಿನಲ್ಲಿದ್ದು, 2021ರಲ್ಲಿ ಈ ದೇವಸ್ಥಾನದ ನಿರ್ಮಾಣ ಕಾರ್ಯವನ್ನು ವಿಧಿವತ್ತಾಗಿ, ಶಾಸ್ತ್ರಬದ್ಧ ವಾಗಿ ದಿನೇಶ್ ಗುರೂಜಿಯವರ ಸಾರಥ್ಯದಲ್ಲಿ ಪಂಡಿತ, ಪುರೋಹಿತರ ಮೂಲಕ ನೆರವೇರಿಸಿದ್ದು, 2024ರ ಜನವರಿ ಅಥವಾ ಫೆಬ್ರವರಿಯಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ದಿನಾಂಕ ನಿಗದಿಪಡಿಸಿದ್ದಾರೆ.
ಪುರಂದರ್ ಲೋಕಿಕೆರೆ.