ಕೃತಕ ಬುದ್ಧಿವಂತಿಕೆಯ ಚಾಟ್ಜಿಪಿಟಿ ಕುರಿತ ಚರ್ಚೆ ಈಗ ವ್ಯಾಪಕವಾಗಿದೆ. ಕೃತಕ ಬುದ್ಧಿವಂತಿಕೆ ನಿಯಂತ್ರಿಸಲು ಸರ್ಕಾರ ಗಳು ನೀತಿ ರೂಪಿಸಬೇಕೆಂದು ವಿಶ್ವಸಂಸ್ಥೆ ಸಹ ಸಲಹೆ ನೀಡಿದೆ. ಆದರೆ, ಕೃತಕ ಬುದ್ಧಿವಂತಿಕೆ ರೂಪಿಸಲು ಈಗ ಬಳಸಲಾಗುತ್ತಿರುವ ಕಂಪ್ಯೂಟರ್ಗಳಿ ಗಿಂತಲೂ ಲಕ್ಷಗಟ್ಟಲೆ ವೇಗದಲ್ಲಿ ಕೆಲಸ ಮಾಡುವ ಕಂಪ್ಯೂಟರ್ಗಳು ಬಂದರೆ ಏನಾಗ ಬಹುದು? ಈಗಿರುವ ಕಂಪ್ಯೂಟರ್ಗಳು ಸಾವಿರಾರು ವರ್ಷಗಳಲ್ಲಿ ಲೆಕ್ಕ ಮಾಡುವುದನ್ನು ಕ್ಷಣಗಳಲ್ಲೇ ಲೆಕ್ಕ ಮಾಡುವ ಉಪಕರಣ ಬಂದರೆ ಏನಾಗಬಹುದು?
ಕ್ವಾಂಟಂ ಸಿದ್ಧಾಂತ ಆಧರಿಸಿದ ಕಂಪ್ಯೂಟರ್ ಗಳು ಊಹಿಸಲಸಾಧ್ಯ ವೇಗವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಭೌತ ಶಾಸ್ತ್ರಜ್ಞ ಮಿಚಿಯೋ ಕಾಕು ಅವರು ಕ್ವಾಂಟಂ ಕಂಪ್ಯೂಟರ್ ಬಳಕೆ ಆರಂಭವಾದ ನಂತರದ ದಿನಗಳು ಹೇಗಿರಲಿವೆ ಎಂಬುದರ ಚಿತ್ರಣವನ್ನು ತಮ್ಮ ಇತ್ತೀಚಿನ ಪುಸ್ತಕವಾದ `ಕ್ವಾಂಟಂ ಸುಪ್ರ ಮಸಿ’ಯಲ್ಲಿ ಮುಂದಿಡುತ್ತಿದ್ದಾರೆ. ಈಗಿನ ಡಿಜಿ ಟಲ್ ಯುಗದ ನಂತರ ಬರುವ ಕ್ವಾಂಟಂ ಯುಗ ಊಹಿಸಲಸಾಧ್ಯ ವೈಜ್ಞಾನಿಕ ಹಾಗೂ ಸಾಮಾಜಿಕ ಬದಲಾವಣೆ ತರಲಿದೆ ಎಂದವರು ಹೇಳಿದ್ದಾರೆ.
ಕ್ವಾಂಟಂ ಕಂಪ್ಯೂಟರ್ಗಳು ಟ್ರಾನ್ಸಿಸ್ಟರ್ಗಳ ಆಧಾರದ ಮೇಲೆ ಕಾರ್ಯನಿರ್ವಹಿಸುವುದಿಲ್ಲ. ಅವುಗಳು ಸಬ್ಅಟಾಮಿಕ್ ಆಧರಿತವಾಗಿ ರುತ್ತವೆ. ಭಾರೀ ಶಕ್ತಿಶಾಲಿ ಕಂಪ್ಯೂಟರ್ ಆಗಿರ ಲಿವೆ. ಇದು ರಾಕೆಟ್ ಇಂಜಿನ್ ಅನ್ನು ಕಾರಿಗೆ ಅಳವಡಿಸಿದ ರೀತಿಯಲ್ಲಿರಲಿದೆ ಎಂದ ಕಾಕು ಹೇಳಿದ್ದಾರೆ.
ನ್ಯೂಯಾರ್ಕ್ನ ಸಿಟಿ ಯುನಿವರ್ಸಿಟಿಯಲ್ಲಿ ಉಪನ್ಯಾಸಕರಾಗಿರುವ ಕಾಕು, ಕ್ವಾಂಟಂ ಕಂಪ್ಯೂಟರ್ಗಳಿಂದ ಭವಿಷ್ಯದ ದಿನಗಳಿಗೆ ಅತಿ ಹೆಚ್ಚಿನ ಲಾಭವಾಗಲಿದೆ ಎಂದು ನಂಬಿದ್ದಾರೆ.
ಚಾಟ್ಜಿಪಿಟಿ ಅಡ್ಡ ಪರಿಣಾಮಗಳ ಕುರಿತು ಅತಿಯಾಗಿ ವೈಭವೀಕರಿಸಲಾಗುತ್ತಿದೆ. ವೈಜ್ಞಾನಿಕ ಬೆಳವಣಿಗೆಗಳ ಕಾರಣದಿಂದ ಉದ್ಯೋಗದ ಮೇಲೆ ಪರಿಣಾಮವಾಗುತ್ತಿರುವುದು ಇದೇ ಮೊದಲ ಬಾರಿಯೇನೂ ಅಲ್ಲ. ಆದರೆ, ಚಾಟ್ಜಿಪಿಟಿಯಿಂದ ಪತ್ರಿಕೋದ್ಯಮದ ಮೇಲೆ ಅಗಾಧವಾದ ಪರಿಣಾಮವಾಗುವ ಕಾರಣ, ಪತ್ರಕರ್ತರು ಈ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎಂದು ಕಾಕು ಹೇಳಿದ್ದಾರೆ.
ಆದರೆ, ಇದೆಲ್ಲದಕ್ಕೂ ಮೀರಿ ಕ್ವಾಂಟಂ ಕಂಪ್ಯೂಟರ್ಗಳು ಬರುವುದರಿಂದ ರಸಾಯನ ಶಾಸ್ತ್ರ, ಜೀವಶಾಸ್ತ್ರ ಹಾಗೂ ಭೌತಶಾಸ್ತ್ರ ಸೇರಿದಂತೆ ಮೂಲಭೂತ ಸಂಶೋಧನೆಯಲ್ಲಿ ಅಗಾಧ ಬದಲಾವಣೆ ಯಾಗಲಿದೆ. ವಾತಾವರಣ ದಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ಅನ್ನು ಇಂಧನವಾಗಿ ಪರಿವರ್ತಿಸಲು ಸಾಧ್ಯವಾಗಲಿದೆ. ತ್ಯಾಜ್ಯದಿಂದ ಹೊಸ ಉಪಕರಣಗಳನ್ನು ತಯಾರಿ ಸಲು ಸಾಧ್ಯವಾಗಲಿದೆ. ಹೆಚ್ಚಿನ ತಾಪ ಮಾನವಿಲ್ಲದೇ ಗಾಳಿಯಿಂದ ನೈಟ್ರೋಜನ್ ಪಡೆಯಲು ಸಾಧ್ಯವಾಗಲಿದೆ. ಇದರಿಂದ ಹಸಿರು ಇಂಧನದ ಕ್ರಾಂತಿಯೇ ಆಗಲಿದೆ ಎಂದವರು ವಾದ ಮುಂದಿಡುತ್ತಿದ್ದಾರೆ.
ಹೊಸ ರೀತಿಯ ಬ್ಯಾಟರಿಗಳನ್ನು ಉತ್ಪಾದಿಸಿ ಹೆಚ್ಚಿನ ಇಂಧನ ಹಿಡಿದಿಡಲು ಸಾಧ್ಯವಾಗಲಿದೆ. ಇಂಜಿನಿಯರಿಂಗ್ ವಲಯ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಉತ್ತರ ಸಿಗಲಿದೆ. ಕ್ಯಾನ್ಸರ್ನಿಂದ ಹಿಡಿದು ಪಾರ್ಕಿನ್ಸನ್ ವರೆಗೆ ಹತ್ತಾರು ರೋಗಗಳಿಗೆ ಪರಿಹಾರ ಸಿಗಲಿದೆ ಎಂದವರು ಹೇಳಿದ್ದಾರೆ.
ಇದೆಲ್ಲ ಹೇಗೆ ಸಾಧ್ಯವಾಗಲಿದೆ? ಕ್ವಾಂಟಂ ಕಂಪ್ಯೂಟರ್ಗಳ ಪ್ರಮುಖ ಲಾಭ ಎಂದರೆ, ಇವುಗಳು ಡಿಜಿಟಲ್ ಕಂಪ್ಯೂಟರ್ಗಳಿಗಿಂತ ಅತಿ ವೇಗವಾಗಿ ಕೆಲಸ ಮಾಡುತ್ತವೆ. ಇದು ಸಂಶೋಧನಾ ಕಾರ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ನೆರವಾಗಲಿದೆ. ಈಗಿರುವ ಕಂಪ್ಯೂಟರ್ಗಳು ಸಾಂಪ್ರದಾಯಿಕ ಭೌತಶಾಸ್ತ್ರ ತತ್ವಗಳನ್ನು ಅನುಸರಿಸಿವೆ. ಕ್ವಾಂಟಂ ಕಂಪ್ಯೂಟರ್ಗಳಿಗೆ ಈ ತತ್ವಗಳು ಅನ್ವಯಿಸುವುದಿಲ್ಲ. ಸಬ್ಅಟಾಮಿಕ್ ಆಧರಿತ ಕಂಪ್ಯೂಟರ್ಗಳು ಕ್ವಾಂಟಂನ ನಿಗೂಢ ತತ್ವಗಳನ್ನು ಬಳಸಿಕೊಳ್ಳುತ್ತವೆ. ಕ್ವಾಂಟಂ ನಿಗೂ ಢತೆಯಿಂದ ಖ್ಯಾತ ವಿಜ್ಞಾನಿ ಅಲ್ಬರ್ಟ್ ಐನ್ ಸ್ಟೀನ್ ಅವರೇ ಅಚ್ಚರಿಗೊಂಡಿದ್ದರು. ಕ್ವಾಂಟಂನ ನಿಗೂಢತೆಯನ್ನು ಬಣ್ಣಿಸಲು ಈಗಿ ರುವ ಯಾವ ಭಾಷೆಯಿಂದಲೂ ಸಾಧ್ಯವಾಗದು, ಕ್ವಾಂಟಂ ಗುಣ ವಿವರಿಸುವಷ್ಟು ಯಾವ ಭಾಷೆಯೂ ಅಭಿವೃದ್ಧಿಯಾಗಿಲ್ಲವೆಂದು ವಿಜ್ಞಾನ ಸಂವಾದ ಕಾರ ಸಬೈನ್ ಹಾಸೆನ್ಫೀಲ್ಡರ್ ಹೇಳಿದ್ದರು.
ಕ್ವಾಂಟಂ ಕಂಪ್ಯೂಟರ್ಗಳಿಂದ ಸಾಕಷ್ಟು ಲಾಭವಿದೆ ಎಂದು ವಿಜ್ಞಾನಿಗಳು ಹೇಳುತ್ತಾರಾ ದರೂ, ಅದನ್ನು ನಿರ್ಮಿಸುವುದು ಹಾಗೂ ನಿರ್ವಹಿಸುವುದು ಅತ್ಯಂತ ಕಠಿಣವಾಗಿದೆ. ಕ್ವಾಂಟಂ ಕಣಗಳು ಅತ್ಯಂತ ಸೂಕ್ಷ್ಮವಾಗಿವೆ. ಶೂನ್ಯದಷ್ಟು ಕಡಿಮೆ ತಾಪಮಾನದಲ್ಲಿ ಮಾತ್ರ ಇವು ಕಾರ್ಯನಿರ್ವಹಿಸಲು ಸಾಧ್ಯ. ಸಂಪೂರ್ಣ ನಿಶ್ಯಬ್ದ ವಾತಾವರಣ ಬಯಸುತ್ತವೆ.
ಈಗಿರುವ ಕ್ವಾಟಂ ಕಂಪ್ಯೂಟರ್ಗಳಲ್ಲಿ ಐ.ಬಿ.ಎಂ.ನ ಒಸ್ಪ್ರೇ ಆಧುನಿಕವಾಗಿದೆ. ಇದು 433 ಕ್ಯೂಬಿಟ್ ಸಾಮರ್ಥ್ಯದ್ದಾಗಿದೆ. ಈ ಕಂಪ್ಯೂಟರ್ ಒಂದು ಕ್ಷಣದ ಅತ್ಯಲ್ಪ ಭಾಗ ಕಾರ್ಯನಿರ್ವಹಿಸುವಷ್ಟರಲ್ಲೇ ಶಬ್ದ ಸಮಸ್ಯೆ ಯಿಂದ ಸ್ಥಗಿತಗೊಳ್ಳುತ್ತದೆ. ಈ ಕಂಪ್ಯೂಟರ್ ಬಳಸಬಹುದಾದ ವಲಯಗಳೂ ಸೀಮಿತವಾಗಿವೆ.
ಪ್ರಪಂಚದ ನೈಜ ಸಮಸ್ಯೆಗಳನ್ನು ಬಗೆಹರಿ ಸುವ ಕ್ವಾಂಟಂ ಕಂಪ್ಯೂಟರ್ ರೂಪುಗೊಳ್ಳಲು ಇನ್ನೂ ಹಲವಾರು ವರ್ಷಗಳು ಬೇಕಾಗಲಿವೆ ಎಂದು ಕಾಕು ಹೇಳಿದ್ದಾರೆ.
ಲ್ಯಾಪ್ಟಾಪ್ ರೀತಿಯಲ್ಲಿ ಕ್ವಾಂಟಂ ಕಂಪ್ಯೂಟರ್ ಬಳಸಲು ಎಂದೂ ಸಾಧ್ಯವಾಗದು ಎಂದು ಮೊಟೆಪೆಲಿಯರ್ ವಿಶ್ವವಿದ್ಯಾ ನಿಲಯದ ಮೈಖೆಲ್ ಡ್ಯಾಕೊನೊವ್ ಅಭಿಪ್ರಾಯ ಪಟ್ಟಿದ್ದಾರೆ. ಆದರೂ, ವಿಶ್ವದ ಹಲವಾರು ಗುಪ್ತಚರ ಸಂಸ್ಥೆಗಳು ಕ್ವಾಂಟಂ ಯುಗಕ್ಕೆ ಸಜ್ಜಾಗ ಬೇಕೆಂದು ಬಯಸಿವೆ. ಐ.ಬಿ.ಎಂ., ಗೂಗಲ್, ಮೈಕ್ರೋ ಸಾಫ್ಟ್ ಹಾಗೂ ಇಂಟೆಲ್ ಕಂಪನಿಗಳು ಈ ತಂತ್ರಜ್ಞಾ ನಕ್ಕೆ ಸಾಕಷ್ಟು ಹೂಡಿಕೆ ಮಾಡಿವೆ. ಚೀನಾ ಸರ್ಕಾರ 113 ಕ್ಯೂಬಿಟ್ ಕಂಪ್ಯೂಟರ್ ಅನ್ನು ಅಭಿವೃದ್ಧಿ ಪಡಿಸಿದೆ.
ಕ್ವಾಂಟಂ ಸರಿಯಾದ ರೀತಿಯಲ್ಲಿ ಸಾಗಿದರೆ ಅದು ಟೆಕ್ ವಲಯದಲ್ಲಿ ಕ್ರಾಂತಿಕಾರಕ ಬದಲಾ ವಣೆ ತರಲಿದೆ. ಇಂದಿನ ಟೆಕ್ ದೈತ್ಯ ಕಂಪನಿಗಳು ಸಂಪೂರ್ಣ ಹೊಸ ಸ್ವರೂಪ ಪಡೆಯ ಬೇಕಾಗು ತ್ತದೆ. ಸಿಲಿಕಾನ್ ಕಣಿವೆಯ ತಂತ್ರಜ್ಞಾನ ಓಬಿರಾಯನ ಕಾಲದಂತಾಗುತ್ತದೆ ಎಂದು ಕಾಕು ಹೇಳಿದ್ದಾರೆ.
ಎಸ್.ಎ. ಶ್ರೀನಿವಾಸ್
[email protected]