ನಾಡಹಬ್ಬಕ್ಕೆ ರಾಷ್ಟ್ರಪತಿ ಚಾಲನೆ

Home ರಾಜಕೀಯ ನಾಡಹಬ್ಬಕ್ಕೆ ರಾಷ್ಟ್ರಪತಿ ಚಾಲನೆ
ನಾಡಹಬ್ಬಕ್ಕೆ ರಾಷ್ಟ್ರಪತಿ ಚಾಲನೆ

ಮೈಸೂರು, ಸೆ. 26 – ಕೊರೊನಾ ನಂತರ ಮೊದಲ ಬಾರಿಗೆ ಅದ್ಧೂರಿಯಾಗಿ ನಡೆದ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಲನೆ ನೀಡಿದ್ದಾರೆ.

ಹತ್ತು ದಿನಗಳ ದಸರಾಗೆ ಇದೇ ಮೊದಲ ಬಾರಿಗೆ ರಾಷ್ಟ್ರಪತಿಯೊಬ್ಬರು ಚಾಲನೆ ನೀಡಿದ್ದಾರೆ. ಇದರಿಂದಾಗಿ ಸಮಾರಂಭಕ್ಕೆ ಮತ್ತಷ್ಟು ಕಳೆ ಬಂದಿತ್ತು.

ಬೆಳ್ಳಿ ಪಲ್ಲಕ್ಕಿಯಲ್ಲಿ ಇರಿಸಲಾಗಿದ್ದ ನಾಡದೇವಿ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುರ್ಮು ಅವರು ಆರತಿ ಬೆಳಗಿ, ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್, ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಹಾಗೂ ಶೋಭ ಕರಂದ್ಲಾಜೆ ಮತ್ತು ಹಲವಾರು ರಾಜ್ಯ ಸಚಿವರು ಉಪಸ್ಥಿತರಿದ್ದರು. ಚಾಮುಂಡೇಶ್ವರಿ ದೇವಾಲಯಕ್ಕೂ ಭೇಟಿ ನೀಡಿದ ಅವರು, ನಾಡ ದೇವತೆಗೆ ಪೂಜೆ ಸಲ್ಲಿಸಿದರು. ಇದು ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾದ ನಂತರ ನೀಡಿದ ಮೊದಲ ಭೇಟಿಯೂ ಆಗಿದೆ. §ದೇವಿ ಚಾಮುಂಡೇಶ್ವರಿಗೆ, ನೆರೆದ ಎಲ್ಲ‌ ಸಹೃದಯರಿಗೆ ಹೃದಯ ಪೂರ್ವಕ ನಮಸ್ಕಾರಗಳು¬ ಎಂದು ಮುರ್ಮು ಅವರು ಕನ್ನಡದಲ್ಲಿ ತಮ್ಮ ಭಾಷಣ ಆರಂಭಿಸಿದರು.

12 ನೇ ಶತಮಾನದಲ್ಲಿ‌ ಬಸವಣ್ಣ, ಅಲ್ಲಮ ಪ್ರಭು, ಅಕ್ಕ ಮಹಾ ದೇವಿ  ಅಧ್ಯಾತ್ಮಿಕ, ಸಾಮಾಜಿಕ ಪ್ರಗತಿ ಗಾಗಿ ದುಡಿದರು. ಬಸವಣ್ಣ ಸಮಾನತೆಯ ಸಮಾಜಕ್ಕಾಗಿ ಅನುಭವ ಮಂಟಪವನ್ನು ಸ್ಥಾಪಿಸಿದರು. ಅಧ್ಯಾತ್ಮ ಸಾಧನೆಗಾಗಿ ಶಂಕರಾಚಾರ್ಯರು ಶೃಂಗೇರಿ ಮಠ ಸ್ಥಾಪಿಸಿದರು ಎಂದು ಮುರ್ಮು ಹೇಳಿದರು. ರಾಜ್ಯದಲ್ಲಿ ರಾಣಿ‌ ಅಬ್ಬಕ್ಕ,‌ ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ ಮಹಿಳಾ ಮಾದರಿಗಳಾಗಿದ್ದಾರೆ. ಮಹಿಷಾಸುರನನ್ನು ದೇವಿ ಚಾಮುಂಡಿ ಕೊಂದ ನಂತರ ಅಧ್ಯಾತ್ಮಿಕ ಮಹತ್ವವನ್ನು ಪಡೆದಿರುವ‌ ಕ್ಷೇತ್ರದಲ್ಲಿ ದಸರಾ ಉತ್ಸವವನ್ನು ಉದ್ಘಾ ಟಸಿ ಪರಂಪರೆ ಯೊಂದಿಗೆ ಮುನ್ನಡೆ ಯಲು ಅಪರೂಪದ ಅವಕಾಶ ದೊರಕಿದ್ದು ಸಂತಸ ತಂದಿದೆ ಎಂದರು.

ಕರ್ನಾಟಕವು ಸುದೀರ್ಘ ಕಾಲ ದಿಂದ ಭಕ್ತಿ, ಸಮಾನತೆ, ಪ್ರಜಾಪ್ರಭುತ್ವ ಹಾಗೂ ಮಹಿಳಾ ಸಬಲೀಕರಣದ ಸಿದ್ಧಾಂತಗಳನ್ನು ಕಾಯ್ದುಕೊಳ್ಳುತ್ತಾ ಬಂದಿದೆ. ನವರಾತ್ರಿ ವೇಳೆ ನವದುರ್ಗೆಯರ ಪೂಜೆ ಮಾಡುವುದು ಮಹಿಳಾ ತತ್ವಗಳಿಗೆ ಸಂಭ್ರಮ ಎಂದೂ ಅವರು ತಿಳಿಸಿದರು.

error: Content is protected !!