ಐಸಿಆರ್‌ ತರಳಬಾಳು ಕೃಷಿ ಕೇಂದ್ರದಿಂದ ಶೇಂಗಾ ಬೆಳೆಯಲ್ಲಿ ಕ್ಷೇತ್ರೋತ್ಸವ

ನ್ಯಾಮತಿ, ಸೆ.28- ದಾವಣಗೆರೆಯ ಐಸಿಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ   ನ್ಯಾಮತಿ ತಾಲ್ಲೂ ಕಿನ ರಾಮೇಶ್ವರ ಗ್ರಾಮದಲ್ಲಿ ಶೇಂಗಾ ಬೆಳೆಯಲ್ಲಿ ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು.  ಬೇಸಾಯ ತಜ್ಞ ಮಲ್ಲಿಕಾರ್ಜುನ್ ಮಾತನಾಡಿ, ಶೇಂಗಾ ತಳಿಗಳಾದ GPBD 4 ಹಾಗೂ G-2-52 ಉತ್ತಮವಾಗಿದ್ದು, ಮುಂದಿನ ದಿನಗಳಲ್ಲಿ ಈ ತಳಿಗಳನ್ನು ರೈತ ಬಾಂಧವರು ನ್ಯಾಮತಿ ತಾಲ್ಲೂಕಿನಲ್ಲಿ ಬೆಳೆಯಬಹುದು. ಎರಡು ತಳಿಗಳು ಉತ್ತಮ ಕಾಯಿ ಇಳುವರಿ ಕೊಡುವ ಜೊತೆಗೆ ಮೇವಿನ ಇಳುವರಿಯು ಕೂಡ ಉತ್ತಮವಾಗಿದ್ದು, ಕಟಾವು ಮಾಡುವ ಸಮಯದಲ್ಲಿ ಇನ್ನೂ ಹಸಿರಾಗಿ ಇರುತ್ತದೆ. 

ಕೇಂದ್ರದ ವಿಸ್ತರಣಾ ತಜ್ಞ ರಘುರಾಜ್ ಮಾತನಾಡಿ, ಈ ತಳಿಗಳನ್ನು ಬೀಜೋತ್ಪಾದನೆ ಮಾಡುವುದು ಉತ್ತಮ ಎಂದರು. 

ರಾಮೇಶ್ವರ ಗ್ರಾಮದ ಪ್ರಗತಿಪರ ರೈತ ಮಲ್ಲೇಶಪ್ಪ ಅವರು, ಶೇಂಗಾ ತಳಿಗಳು ಉತ್ತಮವಾಗಿ ಬಂದಿದ್ದು, ನಮಗೆ ದನಕರುಗಳಿಗೆ ಉತ್ತಮ ಮೇವು ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.

error: Content is protected !!