ಬಂದ್ : ರಾಣೇಬೆನ್ನೂರಿನಲ್ಲಿ ಯಶಸ್ವಿ

ರಾಣೇಬೆನ್ನೂರು, ಸೆ. 28- ವಿವಿಧ ರೈತ ಸಂಘಟನೆಗಳು, ದಿನಗೂಲಿ ನೌಕರರ ಸಂಘ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಮುಖಂಡರು ಒಟ್ಟಾಗಿ ಕರ್ನಾಟಕ ಬಂದ್ ಯಶಸ್ವಿಗೊಳಿಸಿದರು.

ಬೆಳಿಗ್ಗೆ ಕೆಇಬಿ ಗಣೇಶ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ನ್ಯಾಯಾಲಯ ಬಳಿ ರಸ್ತೆ ರೋಖೋ ನಡೆಸಿ,   ಪೋಸ್ಟ್ ಸರ್ಕಲ್ ಗೆ ತೆರಳಿ  ಅಲ್ಲಿ ಸರ್ಕಾರದ ನ್ಯೂನತೆಗಳ ಬಗ್ಗೆ ಮಾತನಾಡಿ, ಸುತ್ತೋಲೆ ಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ತಹಶಿಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರೈತ ಸಂಘಗಳ ಪದಾಧಿಕಾ ರಿಗಳಾದ ರವೀಂದ್ರಗೌಡ ಪಾಟೀಲ, ಈರಣ್ಣ ಹಲಗೇರಿ, ಹನಮಂತಪ್ಪ ಕಬ್ಬಾರ, ಸುರೇಶ ಗರಡಿಮನಿ, ದಿನಗೂಲಿ ಸಂಘದ ಬಸವರಾಜ ಕೊಂಗಿ, ಜೆಡಿಎಸ್ ನ ಎಸ್ ಡಿ ಹಿರೇಮಠ, ಕಾಂಗ್ರೆಸ್ ನ ಮಂಜನಗೌಡ ಪಾಟೀಲ, ಬಸವ ರಾಜ ಹುಚ್ಚಗೊಂಡರ, ವೀರನ ಗೌಡ ಪೊಲೀಸ್‌ಗೌಡ್ರ,  ಬಸವ ರಾಜ ಸವಣೂರ ಮೊದಲಾದವರು ಪಾಲ್ಗೊಂಡಿದ್ದರು.

ನೂರಾರು ಬೈಕ್‌ಗಳಲ್ಲಿ  ಹಸಿರು ಧ್ವಜ ಕಟ್ಟಿಕೊಂಡು ಬಂದ ಗ್ರಾಮೀಣ ಭಾಗದ ರೈತರು ಟ್ರ್ಯಾಕ್ಟರ್ ಇನ್ನಿತರೆ ವಾಹನಗಳಲ್ಲಿ ಬಂದ ಪಕ್ಷಗಳ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಬಂದ್ ಯಶಸ್ಸಿಗೆ ಸಾಕ್ಷಿಯಾದರು.

error: Content is protected !!