ದಾವಣಗೆರೆ, ಸೆ. 12- ಮಹಿಳಾ ಕಾಂಗ್ರೆಸ್ ಪಕ್ಷದ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾಯಕೊಂಡ ಮತ್ತು ಬಸವಾಪಟ್ಟಣ ಬ್ಲಾಕ್ಗೆ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ.
ಮಾಯಕೊಂಡ ಬ್ಲಾಕ್ ಅಧ್ಯಕ್ಷರಾಗಿ ಐಗೂರು ಗ್ರಾಮದ ಶ್ರೀಮತಿ ಉಷಾ ಚಿದಾನಂದ ಹಾಗೂ ಬಸವಾಪಟ್ಟಣ ಬ್ಲಾಕ್ ಅಧ್ಯಕ್ಷರಾಗಿ ಚನ್ನಗಿರಿ ತಾಲ್ಲೂಕಿನ ನಲ್ಕುದುರೆ ಗ್ರಾಮದ ಶ್ರೀಮತಿ ಎಂ.ಜಿ. ಶಶಿಕಲಾಮೂರ್ತಿ ಅವರು ನೇಮಕಗೊಂಡಿದ್ದಾರೆ.
ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಹಾಗೂ ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನಿತಾಬಾಯಿ ಮಾಲತೇಶ್ರಾವ್ ಅವರ ಸಮ್ಮುಖದಲ್ಲಿ ಉಭಯ ಅಧ್ಯಕ್ಷರಿಗೆ ಆದೇಶ ಪತ್ರ ವಿತರಿಸಲಾಯಿತು. ಜಿ.ಪಂ. ಸದಸ್ಯ ಕೆ.ಎಸ್.ಬಸವಂತಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸುಷ್ಮಾ ಪಾಟೀಲ್, ಉಪಾಧ್ಯಕ್ಷರಾದ ಮಂಜುಳಾ ಎ.ಈ, ವಿಜಯ, ಕಾರ್ಯದರ್ಶಿ ಕವಿತಾ, ತಾಲ್ಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಆಶಾರಾಣಿ ಮುರುಳಿ, ಕುಮಾರ್ ಸಿ.ಟಿ, ಇನ್ನು ಮತ್ತಿತರರು ಉಪಸ್ಥಿತರಿದ್ದರು.