ರಾಣೇಬೆನ್ನೂರು, ಸೆ.12- ಸ್ಥಳೀಯ ಉಪನೋಂದಣಿ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡುವ ಕಾರ್ಯ ನಡೆದಿದ್ದು, ಸರ್ಕಾರ ಇದನ್ನು ತಡೆದು, ಮಿನಿ ವಿಧಾನ ಸೌಧದಲ್ಲಿಯೇ ಉಳಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಸಾರ್ವಜನಿಕರ ಕೆಲಸ ಒಂದೇ ಸೂರಿನಡಿ ನಡೆಯಬೇಕು. ಜನಸೇವೆ ಸರ್ಕಾರದ ಆದ್ಯತೆಯಾಗಬೇಕು ಎನ್ನುವ ಸದುದ್ದೇಶದೊಂದಿಗೆ ರಾಜ್ಯಾದ್ಯಂತ ಸಾವಿರಾರು ಕೋಟಿ ಹಣ ಖರ್ಚು ಮಾಡಿ ಮಿನಿ ವಿಧಾನಸೌಧಗಳನ್ನು ಕಟ್ಟಿಸಲಾಯಿತು. ಹೀಗಿದ್ದಾಗಲೂ ಇಲ್ಲಿರುವ ಕಚೇರಿಯನ್ನು ಸ್ಥಳಾಂತರ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಮಿನಿ ವಿಧಾನಸೌಧದಲ್ಲಿಯೇ ಉಳಿಸಬೇಕು ಎಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಆಗ್ರಹಿಸಿದ್ದಾರೆ.