ಹರಿಹರ, ಸೆ.13- ನಗರದ ಹರಪನಹಳ್ಳಿ ರಸ್ತೆಯ ಎಂ.ಕೆ.ಇ.ಟಿ. ಪ್ರೌಢಶಾಲೆ ಮತ್ತು ಸಿಬಿಎಸ್ ಇ ಶಾಲೆಯಲ್ಲಿ ಇತ್ತೀಚಿಗೆ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯಲು ಶಿವಮೊಗ್ಗ, ಹಾವೇರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಯ ಸುಮಾರು 540 ವಿದ್ಯಾರ್ಥಿಗಳು ಆಗಮಿಸಿ ಪರೀಕ್ಷೆಯನ್ನು ಬರೆದರು. ಒಂದೊಂದು ಶಾಲೆಯಲ್ಲಿ ಇಪ್ಪತ್ತು ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಕುಳಿತು ಪರೀಕ್ಷೆ ಬರೆಯುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಪರೀಕ್ಷೆ ಬರೆಯಲು ಆಗಮಿಸಿದ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ಮಾಡಿ ನಂತರದಲ್ಲಿ ಪರೀಕ್ಷಾ ಕೊಠಡಿಗಳಿಗೆ ಬಿಡಲಾಯಿತು.
ಶಾಲಾ ಆವರಣದ ಮುಂಭಾಗದಲ್ಲಿ ಪೋಷಕರು ದೊಡ್ಡ ಪ್ರಮಾಣದಲ್ಲಿ ಸೇರಿದ್ದರಿಂದ ಮತ್ತು ಅವರು ತಂದಿದ್ದ ಕಾರುಗಳ ಸಂಖ್ಯೆ ಅಧಿಕ ಪ್ರಮಾಣದಲ್ಲಿ ಇದ್ದುದರಿಂದ ರಸ್ತೆ ಜಾಮ್ ಆಗಿ ಸಾರ್ವಜನಿಕರು ಓಡಾಡುವುದಕ್ಕೆ ಹರ ಸಾಹಸ ಪಟ್ಟರು.