ದಾವಣಗೆರೆ, ಸೆ.13- ಪೋಷಣ್ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ ನಗರದ ಎಸ್.ಎಂ.ಕೆ. `ಎ’ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಮಹಿಳೆ ಮತ್ತು ಮಕ್ಕಳಲ್ಲಿ ಅಪೌಷ್ಠಿಕತೆ ತಡೆಗಟ್ಟುವ ಬಗ್ಗೆ ಮತ್ತು ಆರೋಗ್ಯ, ನೈರ್ಮಲ್ಯ, ಪೌಷ್ಠಿಕ ಸಮಿತಿ ಬಾಲವಿಕಾಸ ಸಮಿತಿಯ ಸಭೆಗಳನ್ನು ನಡೆಸಿ ಮಾಸ ಆಚರಣೆಯ ಮಹತ್ವ ಕುರಿತು ಮತ್ತು ನ್ಯೂಟ್ರಿ ಗಾರ್ಡನ್ ನಿರ್ಮಿಸುವ ಕುರಿತು ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ 6ನೇ ವಾರ್ಡಿನ ಸದಸ್ಯ ಎಲ್.ಪಿ. ಗೋಣೆಪ್ಪ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಶ್ರೀಮತಿ ಸುಧಾ ಮಕರ, ಎಸ್.ಎಂ.ಕೆ. `ಎ’ ಅಂಗನವಾಡಿ ಕಾರ್ಯಕರ್ತೆ ಆರ್.ಸಿ. ರೇಖಾ, ಅಂಗನವಾಡಿ ಸಹಾಯಕರಾದ ಹೆಚ್. ಜಯಮ್ಮ ಮತ್ತು ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ವಸಂತಮ್ಮ ಹಾಗೂ ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಶರಣಮ್ಮ, ಶ್ರೀಮತಿ ನಾಗವೇಣಿ, ಶ್ರೀಮತಿ ಮಮತ, ಶ್ರೀಮತಿ ಸರಿತ, ಶ್ರೀಮತಿ ಯಲ್ಲಮ್ಮ ಮತ್ತಿತರರು ನ್ಯೂಟ್ರಿ ಗಾರ್ಡನ್ ನಿರ್ಮಿಸುವ ಕುರಿತು ಚರ್ಚಿಸಿದರು.