ದಾವಣಗೆರೆ, ಸೆ.2- ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ವತಿಯಿಂದ ಸಿ ಎಸ್ ಆರ್ ಪ್ರೋಗ್ರಾಂ ಅಡಿಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಗೆ 1 ಲಕ್ಷ ಮೌಲ್ಯದ 6 ಸೋಂಕು ನಿವಾರಕ ಸ್ಯಾನಿಟೈಸರ್ ಸ್ಪ್ರೆಯರ್ ಅನ್ನು ಕೊಡುಗೆಯಾಗಿ ನೀಡಲಾಯಿತು.
ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಗಳ ಕಚೇರಿಯಲ್ಲಿ ಉಜ್ಜೀವನ್ ಬ್ಯಾಂಕ್‍ನ ವಿತರಣಾ ವ್ಯವಸ್ಥಾಪಕ ಶ್ರೀನಿವಾಸ ಮೂರ್ತಿ ಅವರು ಎಸ್ಪಿ ಹನುಮಂತರಾಯ ಅವರಿಗೆ ನೀಡಿದರು.
ಸ್ಟ್ರೆಯರ್ ಸ್ವೀಕರಿಸಿ ಮಾತನಾಡಿದ ಅವರು, ಬ್ಯಾಂಕಿನ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿ, ಜಿಲ್ಲೆಯ ಎಲ್ಲಾ ತಾಲ್ಲೂಕಿನ ಇನ್ಸ್‌ಪೆಕ್ಟರ್ ಗಳ ಕಚೇರಿಗಳಿಗೆ ಈ ಸ್ಪ್ರೇಯರ್ ಗಳನ್ನು ನೀಡಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಪ್ರಕಾಶ್, ಪೊಲೀಸ್ ಸಿಬ್ಬಂದಿಗಳು ಮತ್ತು ಕ್ಷೇತ್ರ ವ್ಯವಸ್ಥಾಪಕ ಮೊಯಿನುದ್ದೀನ್, ಬ್ರಾಂಚ್ ವ್ಯವಸ್ಥಾಪಕ ವಿನಾಯಕ, ವಿಶ್ವ ನಾಥ, ರಾಜಣ್ಣ, ಕಾರ್ಯಾಚರಣೆ ನಿರ್ವಾ ಹಕ ಮಂಜುನಾಥ್, ಪ್ರಾಣೇಶ್ ಮತ್ತು ಬ್ರಾಂಚ್ ನ ಸಿಬ್ಬಂದಿ ವರ್ಗದವರು ಇದ್ದರು.