ದಾವಣಗೆರೆ, ಸೆ.2- ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವಿವಿಧ ವಿಭಾಗಗಳಿಂದ ಅಂತಿಮ ವರ್ಷದ 332 ವಿದ್ಯಾರ್ಥಿಗಳು ಉದ್ಯೋಗ ನೇಮಕಾತಿಯಲ್ಲಿ ಆಯ್ಕೆಯಾಗಿದ್ದಾರೆ. ಈ ನೇಮಕಾತಿಯು ಪ್ರಸ್ತುತ ಶೈಕ್ಷಣಿಕ ವರ್ಷದ ದಾಖಲೆಯ ಉದ್ಯೋಗ ನೇಮಕಾತಿಯಾಗಿದ್ದು, ಅತಿ ಹೆಚ್ಚು ಅಂದರೆ 10 ಲಕ್ಷ ವಾರ್ಷಿಕ ಸಂಬಳದ ಪ್ಯಾಕೇಜನ್ನು ಕಂಪನಿಯು ನೀಡಿದೆ.
ಪ್ರತಿಷ್ಠಿತ ಕಂಪನಿಗಳಾದ ಬೋಷ್ಕ್, ಬೈಜೂಸ್, ಟಿಸಿಎಸ್, ಹೆಚ್‌ಸಿಎಲ್, ವಿಪ್ರೋ, ಎಸ್‌ಎಲ್‌ಕೆ ಸಾಫ್ಟ್ ವೇರ್, ಸರ್ವೀಸ್, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಸಿಸ್ಟಂ, ಮಹೀಂದ್ರಾ ಸಿಐಇ, ಓಜಿ ಹೆಲ್ತ್‌ಕೇರ್, ಅಮೆಜಾನ್, ಆಟೋಮೇಷನ್ ಇತ್ಯಾದಿ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡೆಸಿ ಅನೇಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ಟಿ.ಆರ್. ತೇಜಸ್ವಿ ಕಟ್ಟಿಮನಿ. ಪ್ರಾಂಶುಪಾಲ ಡಾ. ವೈ. ವಿಜಯಕುಮಾರ್ ತಿಳಿಸಿದ್ದಾರೆ.