ದಾವಣಗೆರೆ, ಸೆ.2- ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣ ಗೆರೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀ ಣಾಭಿವೃದ್ಧಿ ಸಂಸ್ಥೆ ಇವರು ಚಂದ್ರನ ಹಳ್ಳಿ ಗ್ರಾಮದ ಸಂಯುಕ್ತಾಶ್ರಯದಲ್ಲಿ ಯಂತ್ರದ ಮುಖಾಂತರ ನಾಟಿ ಮಾಡಿದ ಭತ್ತದ ತಾಕುಗಳಿಗೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿಗಳು ಭೇಟಿ ನೀಡಿದರು.
ಪ್ರಸ್ತುತ ಸಂದರ್ಭದಲ್ಲಿ ಬೆಳೆಗಳಿಗೆ ಜಿಂಕ್ ಅವಶ್ಯಕತೆಯಿದ್ದು, ಟಿಡಿಟಿಎ ಜಿಂಕ್ ಅನ್ನು 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ, ಜೊತೆಗೆ 13 0 45 ಐದು ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದರಿಂದ ಪೋಷಕಾಂಶಗಳ ನಿರ್ವಹಣೆ ಮಾಡುವುದರೊಂದಿಗೆ ಉತ್ತಮ ಇಳುವರಿ ಪಡೆಯಬಹುದು ಎಂದು ಕೇಂದ್ರದ ಮಣ್ಣು ವಿಜ್ಞಾನಿ ಹೆಚ್.ಎಂ.ಸಣ್ಣಗೌಡ್ರು ಸಲಹೆ ನೀಡಿದರು. ಭತ್ತದ ಮುಂಚೂಣಿ ಪ್ರಾತ್ಯಕ್ಷಿಕೆ ತಾಕುಗಳಿಗೆ ಕೇಂದ್ರದ ಹಿರಿಯ ವಿಜ್ಞಾನಿ ಗಳಾದ ಡಾಕ್ಟರ್ ದೇವರಾಜ್ ಟಿ.ಎನ್.ಮಲ್ಲಿಕಾರ್ಜುನ್, ರಘುರಾಜ್, ವಿಜಯಕುಮಾರ್ ಹಾಗೂ ಚಂದ್ರನ ಹಳ್ಳಿಯ ಪ್ರಗತಿಪರ ಮುಂಚೂಣಿ ಪ್ರಾತ್ಯಕ್ಷಿಕೆಯಲ್ಲಿ ರೈತರು ಭಾಗವಹಿಸಿದ್ದರು.