ಮಲೇಬೆನ್ನೂರು ಪುರಸಭೆಗೆ ಮುಖ್ಯಾಧಿಕಾರಿಯಾಗಿ ರುಕ್ಮಿಣಿ

ಮಲೇಬೆನ್ನೂರು, ಸೆ. 1- ಇಲ್ಲಿನ ಪುರಸಭೆ  ಮುಖ್ಯಾಧಿಕಾರಿ ಯಾಗಿ ಶ್ರೀಮತಿ ರುಕ್ಮಿಣಿ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡರು.ಪುರಸಭೆ ಅಧಿಕಾರಿಗಳಾದ ಉಮೇಶ್ ದಿನಕರ್, ಗಣೇಶ್, ನೌಷದ್, ಗುರುಪ್ರಸಾದ್ ಮತ್ತಿತರರು ಈ ವೇಳೆ ಹಾಜರಿದ್ದರು.

ರುಕ್ಮಿಣಿ ಅವರು ಈ ಹಿಂದೆ ಚಿತ್ರದುರ್ಗ ನಗರಸಭೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾಗಿದ್ದರು.  

ಫಾಗಿಂಗ್ : ಪುರಸಭೆ ವತಿಯಿಂದ ಪಟ್ಟಣದ 1ನೇ ವಾರ್ಡ್‍ನಿಂದ ಫಾಗಿಂಗ್ ಮಾಡಲಾಗುತ್ತಿದ್ದು, ಸೊಳ್ಳೆ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಆರೋಗ್ಯಾಧಿಕಾರಿ ಗುರುಪ್ರಸಾದ್ ತಿಳಿಸಿದ್ದಾರೆ.

error: Content is protected !!