ದಾವಣಗೆರೆ,ಆ.29 – ನಗರದ ಹಿಂದು ಮಹಾ ಗಣಪತಿ ವತಿಯಿಂದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಶ್ರೀ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಶಾಸಕ ಶಾಮನೂರು ಶಿವಶಂಕರಪ್ಪ ಅವರು ಇಂದು ಸಂಜೆ ಭೇಟಿ ನೀಡಿ, ಶ್ರೀ ವಿನಾಯಕ ಮೂರ್ತಿಯನ್ನು ವೀಕ್ಷಿಸಿದರು. ಕೆ.ಬಿ.ಶಂಕರನಾರಾಯಣ್, ಮಾಜಿ ಶಾಸಕ ಬಸವರಾಜ ನಾಯ್ಕ, ಜೊಳ್ಳಿ ಗುರು, ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ ಹನಗವಾಡಿ, ಬಿಜೆಪಿ ಯುವ ಮುಖಂಡ ಶ್ರೀನಿವಾಸ ದಾಸಕರಿಯಪ್ಪ, ವಕೀಲ ರಾಘವೇಂದ್ರ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಕುಮಾರ್, ವಿಶ್ವ ಹಿಂದು ಪರಿಷತ್ ನ ರವೀಂದ್ರ, ಸುರೇಶ್ ಗಂಡಗಾಳೆ ಮತ್ತಿತರರು ಉಪಸ್ಥಿತರಿದ್ದರು.
December 25, 2024