ಮಲೇಬೆನ್ನೂರು, ಆ. 27- ಬೆಂಗಳೂರಿನ ಯೂತ್ ಫಾರ್ ಸೇವಾ ಮತ್ತು ಟೆಕ್ಸಾಸ್ ಇನ್ಸ್ಟ್ರುಮೆಂಟ್ ಸಂಸ್ಥೆ ವತಿಯಿಂದ ನೀಡಲಾದ ಮಾಸ್ಕ್ಗಳನ್ನು ಶಿಕ್ಷಕ ಶರಣ್ ಕುಮಾರ್ ಹೆಗಡೆ, ಪುರಸಭೆ, ನಾಡಕಛೇರಿ, ಸಮುದಾಯ ಆರೋಗ್ಯ ಕೇಂದ್ರ ಪೊಲೀಸ್ ಠಾಣೆ ಸಿಬ್ಬಂದಿಗೆ ವಿತರಣೆ ಮಾಡಿದರು. ಉಪ ತಹಸೀಲ್ದಾರ್ ಆರ್. ರವಿ, ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ, ಪಿಎಸ್ಐ ವೀರಬಸಪ್ಪ, ಪುರಸಭೆ ಅಧಿಕಾರಿಗಳಾದ ಉಮೇಶ್, ಗುರುಪ್ರಸಾದ್, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್ ಮತ್ತಿತರರಿದ್ದರು.
January 13, 2025