ರಾಣೇಬೆನ್ನೂರು, ಆ. 21 – ಕೊರೊನಾ ನಿಯಂತ್ರಣದಲ್ಲಿ ಭ್ರಷ್ಟಾಚಾರ, ಅತಿವೃಷ್ಠಿಯಲ್ಲಿ ವೈಫಲ್ಯ, ಭೂಸುಧಾರಣಾ ಕಾಯ್ದೆ, ಎಪಿಎಂಸಿ ಹಾಗೂ ಕೈಗಾರಿಕಾ ವಿವಾದಗಳ ತಿದ್ದುಪಡಿ ಸುಗ್ರೀವಾಜ್ಞೆ ತಂದಿರುವುದನ್ನು ವಿರೋಧಿಸಿ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕೋಳಿವಾಡ ಅಧ್ಯಕ್ಷತೆಯಲ್ಲಿ ಇಂದು ತಹಶೀಲ್ದಾರ್ ಕಛೇರಿಗೆ ತೆರಳಿ ಮನವಿ ಸಲ್ಲಿಸಿದ ಕಾಂಗ್ರೆಸ್ ಪದಾಧಿಕಾರಿಗಳು ಬಿಜೆಪಿ ಸರ್ಕಾರದ ವೈಫಲ್ಯಗಳ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಮನವಿಯಲ್ಲಿ ರಾಜ್ಯಪಾಲರಿಗೆ ಕೇಳಲಾಗಿದೆ.
ತಾಲ್ಲೂಕು ಪಕ್ಷದ ಅಧ್ಯಕ್ಷ ಮಂಜನಗೌಡ ಪಾಟೀಲ, ಮುಖಂಡರುಗಳಾದ ಜಟ್ಟೆಪ್ಪ ಕರೆಗೌಡ್ರ, ಬಸವರಾಜ ಹುಚ್ಚಗೊಂಡರ, ವೀರನಗೌಡ ಪೊಲೀಸ ಗೌಡ್ರ ಮತ್ತಿತರರು ಭಾಗವಹಿಸಿದ್ದರು.