ದಾವಣಗೆರೆ, ಆ.23- ತಾಲ್ಲೂಕಿನ ಎಲೆಬೇತೂರು ಗ್ರಾಮದ ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಯೋಜನೆಯಡಿಯಲ್ಲಿ ಪ್ರತಿನಿತ್ಯ ದೇವಸ್ಥಾನ, ಮಂದಿರ, ಸಮುದಾಯ ಭವನ, ವಠಾರಗಳಲ್ಲಿ ನಿರಂತರ ಶಿಕ್ಷಣ ಕಲಿಕೆಯನ್ನು ಶಿಕ್ಷಕರು ಸರತಿಯಂತೆ ಎಲೆಬೇತೂರು ಸೇರಿ ಪುಟಗನಾಳು, ಕಲಪನಹಳ್ಳಿ ಗ್ರಾಮಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ ಎಂದು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಕೆ.ಹಲಗಣ್ಣನವರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕ ಎಂ.ಷಡಾಕ್ಷರಪ್ಪ, ಮಕ್ಕಳು ಶಿಕ್ಷಣದಿಂದ ದೂರವಾಗಬಾರದು, ಕಲಿಕೆಯಿಂದ ವಂಚಿತರಾಗಬಾರದು ದೃಷ್ಟಿಯಿಂದ ಸರ್ಕಾರ ವಿದ್ಯಾಗಮ ಯೋಜನೆಯನ್ನು ಪ್ರಾರಂಭಿಸಿದ್ದು, ಇದು ಫಲ ನೀಡಿದೆ ಎಂದು ತಿಳಿಸಿದರು.
ಶಿಕ್ಷಕರಾದ ಕೆ.ಬಸವರಾಜ್, ಎಂ.ಕೆ.ರೂಪ, ಬಸವರಾಜ್ ಪಾಟೀಲ್, ಡಿ.ಜಿ.ಪುಷ್ಪಾ, ಕೆ.ಎಂ.ಕಾವ್ಯ, ಮಾಲಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.