ದಾವಣಗೆರೆ, ಆ.23- ನಗರದ ಐಸಿಆರ್ ತರಳ ಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ನ್ಯಾಮತಿ ತಾಲ್ಲೂಕು ರಾಮೇಶ್ವರ ಗ್ರಾಮದಲ್ಲಿ ಶೇಂಗಾದಲ್ಲಿ ವಿವಿಧ ತಳಿಗಳ ಇಳುವರಿ ಅಧ್ಯಯನದ ತಾಕುಗಳಿಗೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದ ವಿಸ್ತ ರಣಾ ನಿರ್ದೇಶಕರಾದ ಡಾ|| ಶಶಿಧರ್ ಅವರು ರೈತರೊಂ ದಿಗೆ ಶೇಂಗಾ ತಳಿಗಳ ಬೆಳವಣಿಗೆ ಬಗ್ಗೆ ಚರ್ಚಿಸಿದರು.
ಕೇಂದ್ರದ ಬೇಸಾಯ ತಜ್ಞರಾದ ಮಲ್ಲಿಕಾರ್ಜುನ್ ಅವರು ವಿವಿಧ ಶೇಂಗಾ ತಳಿಗಳಾದ ಜಿಪಿಬಿಡಿ 4 ಹಾಗೂ ಜಿ2 52 ಎಲೆಚುಕ್ಕೆ ರೋಗ ನಿರೋಧಕ ತಳಿಗಳಾಗಿದ್ದು, ಉತ್ತಮ ಇಳುವರಿ ಬರುವ ನಿರೀಕ್ಷೆಯಲ್ಲಿದೆ. ಐಸಿಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ|| ಟಿ.ಎನ್. ದೇವರಾಜ್ ಅವರು, ಆಹಾರ ಭದ್ರತಾ ಯೋಜನೆಯಡಿಯಲ್ಲಿ ತೊಗರಿ ಬೆಳೆಯ ಮುಂಚೂಣಿ ಪ್ರಾತ್ಯಕ್ಷಿಕೆ ತಾಕುಗಳಿಗೆ ಭೇಟಿ ನೀಡಿ, ಕುಡಿ ಚಿವುಟುವುದರಿಂದ ಉತ್ತಮ ಇಳುವರಿ ಪಡೆಯಬಹುದು. ಪದ್ಧತಿ ಪ್ರಾತ್ಯಕ್ಷಿಕೆ ಮೂಲಕ ಯಂತ್ರದಿಂದ ಕುಡಿಯನ್ನು ಚಿವುಟುವುದು ತೋರಿಸಿ ಕೊಡಲಾಯಿತು.
ಕಾರ್ಯಕ್ರಮದಲ್ಲಿ ಕೇಂದ್ರದ ವಿಜ್ಞಾನಿಗಳಾದ ಬಸವನ ಗೌಡ್, ಹೆಚ್.ಎಂ.ಸಂಗನಗೌಡ, ರಘುರಾಜ್ ಮತ್ತು ಪ್ರಗತಿಪರ ರೈತ ಮಹಿಳೆಯರು ಭಾಗವಹಿಸಿದ್ದರು.