ಕುಂಬಳೂರು ಎಕ್ಕೆಗೊಂದಿ ಶಾಲೆಗಳಿಗೆ ಸ್ಯಾನಿಟೈಸ್, ಥರ್ಮಲ್ ಕೊಡುಗೆ

ಮಲೇಬೆನ್ನೂರು, ಆ. 19- ಹೆಲ್ಪಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇವರ ವತಿಯಿಂದ ಟ್ರಸ್ಟ್ ಅಧ್ಯಕ್ಷರಾದ ಮೂರ್ತಿ, ಕಾರ್ಯದರ್ಶಿ ಮಂಜುನಾಥ್, ಸದಸ್ಯರಾದ ರವಿಕುಮಾರ್ ಅವರು ಎಕ್ಕೆಗೊಂದಿ ಮತ್ತು ಕುಂಬಳೂರು ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಸ್ಯಾನಿಟೈಸ್  ಹಾಗೂ ಥರ್ಮಲ್ ಸ್ಕ್ರೀನಿಂಗ್ ಮತ್ತು  ಸ್ಪೀಕರ್ ಗಳನ್ನು ಉಚಿತವಾಗಿ ವಿತರಿಸಿದರು. ಈ ಸಂದರ್ಭದಲ್ಲಿ ಕುಂಬಳೂರು ಶಾಲೆ ಎಸ್  ಡಿ ಎಂ ಸಿ ಅಧ್ಯಕ್ಷ ಎಂ. ಎಚ್. ಶರಣ್, ಧೂಳೆಹೊಳೆ ಶಾಲೆಯ ಶಿಕ್ಷಕ ಶರಣ್ ಕುಮಾರ್ ಹೆಗಡೆ ಈ  ವೇಳೆ ಹಾಜರಿದ್ದರು,  

error: Content is protected !!