ಹೊನ್ನಾಳಿ, ಆ.19- ಪಟ್ಟಣದ ದೊಡ್ಡಪೇಟೆಯ ಅನುಷಾ ಪಾಟೀಲ್ ಹಾಗೂ ಚಿನ್ಮಯ್ ಪಾಟೀಲ್ ಎಂಬ ಇಬ್ಬರು ಮಕ್ಕಳು ತಮ್ಮ ತಮ್ಮ ಮನೆಗೆ ಪೂಜೆಗೆಂದು ತರುವ ಗಣಪತಿಯನ್ನು ತಾವೇ ಸಿದ್ದಪಡಿಸುತ್ತಿರುವುದು.
ರಜಾ ದಿನದ ಸದುಪಯೋಗಕ್ಕೆ ಮುಂದಾಗಿರುವ ಈ ಮಕ್ಕಳು ವಿದ್ಯೆ ಕೊಡುವ ಗಣಪತಿ ಮೂರ್ತಿಯನ್ನು ತಾವೇ ಸಿದ್ದಪಡಿಸುವ ಮೂಲಕ ವಿದ್ಯೆಯಿಂದ ತಮ್ಮನ್ನು ವಂಚಿತರಾಗದಂತೆ ಕಾಪಾಡು ಗಣಪ ಎಂಬುದಾಗಿ ಈ ಪ್ರಯತ್ನ ನಡೆಸಲು ಮುಂದಾಗಿರುವುದಾಗಿ ತಮ್ಮ ಅಭಿಪ್ರಾಯ ಹಂಚಿ ಕೊಂಡಿದ್ದು ಸಿದ್ದಗೊಳ್ಳುತ್ತಿರುವ ಗಣಪತಿಯನ್ನು ಪುಟಾಣಿಗಳು ವೀಕ್ಷಿಸುತ್ತಿರುವರು.