ಜಗಳೂರು, ಆ.19- ತಾಲ್ಲೂಕಿನ ಚಿಕ್ಕಬನ್ನಿಹಟ್ಟಿ ಮತ್ತು ಹೊಸಕೆರೆ ಗ್ರಾಮದಲ್ಲಿ ರೈತರಿಗೆ ಬೆಳೆ ಸಮೀಕ್ಷೆಯ ಮಹತ್ವ ಮತ್ತು ಬೆಳೆ ಸಮೀಕ್ಷೆ ಆಪ್ ಬಳಕೆ ಕುರಿತು ತರಬೇತಿಯನ್ನು ರೈತರಿಗೆ ನೀಡಲಾಯಿತು. ಕೃಷಿ ಇಲಾಖೆ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥ ಸಂಸ್ಥೆ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರೈತರು ಬೆಳೆ ಸಮೀಕ್ಷೆ ಮೊಬೈಲ್ ಆಪ್ ಬಳಸಿ, ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ವಿವರವನ್ನು ತಾವೇ ಛಾಯಾಚಿತ್ರ ಸಹಿತ ದಾಖಲಿಸುವ ಮಾಹಿತಿಯನ್ನು ಸರಳವಾಗಿ ವಿವರಣೆ ನೀಡಲಾಯಿತು.
ಜಮೀನಿನ ಪಹಣಿಯಲ್ಲಿ ಬೆಳೆದ ಬೆಳೆ ಅಥವಾ ವಿಸ್ತೀರ್ಣ ಸೇರಿಸಿ,.ರೈತರ ಬೆಳೆ ಸಮೀಕ್ಷೆ ಮಾಡುವ ಬಗ್ಗೆ ಅಧಿಕಾರಿಗಳು ಸಮಗ್ರಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಉಪ ಕೃಷಿ ನಿರ್ದೇಶಕ ಕೆ.ಎಸ್.ಶಿವಕುಮಾರ್, ಸಹಾಯಕ ಕೃಷಿನಿರ್ದೇಶಕ ಶ್ರಿನಿವಾಸುಲು. ಬಿ.ವಿ. ಆತ್ಮ ರೇಣುಕುಮಾರ್, ರೇಖಾ, ಧರ್ಮಸ್ಥಳ ಸಂಸ್ಥೆಯ ಪ್ರತಿನಿಧಿಗಳು ಸಹಾಯಕ ಕೃಷಿ ಅಧಿಕಾರಿಗಳು ಭಾಗವಹಿಸಿದರು.