ರಾಣೇಬೆನ್ನೂರು : ಶಾಂತಿ ಸಮಿತಿ ಸಭೆ

ರಾಣೇಬೆನ್ನೂರು, ಆ.18- ಕೋವಿಡ್‍ನಿಂದಾಗಿ ಹಬ್ಬಗಳ ಸಾಂಪ್ರದಾ ಯಿಕ ಆಚರಣೆಯಲ್ಲಿ ಬದಲಾವಣೆ ಅನಿವಾರ್ಯ ಎಂದು ಹೆಚ್ಚುವರಿ ಎಸ್‍ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು. ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಸಂಜೆ ಗಣೇಶ ಚತುರ್ಥಿ ಹಾಗೂ ಮೊಹೋರಂ ಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದ್ದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕ ಗಣಪತಿ ಸಮಿತಿಯವರು ಈ ಬಾರಿ ತಮ್ಮ ಪ್ರದೇಶದ ದೇವಸ್ಥಾನ ಅಥವಾ ಉದ್ಯಾನಗಳಲ್ಲಿ ಸರಳವಾಗಿ ಪ್ರತಿಷ್ಠಾಪಿಸಲು ಅವಕಾಶ ನೀಡಲಾಗಿದೆ. ಸರಕಾರದ ಕೋವಿಡ್ ನಿಯಮ ಗಳನ್ನು ಚಾಚೂ ತಪ್ಪದೇ ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.

ತಹಶೀಲ್ದಾರ್ ಬಸನಗೌಡ ಕೋಟೂರ, ಪೌರಾಯುಕ್ತ ಡಾ.ಮಹಾಂತೇಶ್, ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ, ಜಮಾಲಸಾಬ್ ಅತ್ತಾರ ಮಾತನಾಡಿದರು.  ಸಿಪಿಐ ಲಿಂಗನಗೌಡ ನೆಗಳೂರ, ವಿರುಪಾಕ್ಷಪ್ಪ, ಪಿಎಸ್‍ಐಗಳಾದ ಮೇಘರಾಜ, ಪ್ರಭು ಕೆಳಗಿನ ಮನಿ, ನಗರಸಭಾ ಸದಸ್ಯರುಗಳಾದ ಗಂಗಮ್ಮ ಹಾವನೂರ, ನಿಂಗರಾಜ ಕೋಡಿಹಳ್ಳಿ, ಸಿದ್ದಪ್ಪ ಬಾಗಿಲದವರ, ನೂರುಲ್ಲಾಖಾಜಿ, ಅಂಜುಮನ್ ಸಂಸ್ಥೆ ಮತ್ತು ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಇದ್ದರು.

error: Content is protected !!