ಮಲೇಬೆನ್ನೂರು, ಆ.15- ಎಳೆಹೊಳೆ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣಕ್ಕೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ನಿನ್ನೆ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು. ಜಿ.ಪಂ.ಮಾಜಿ ಸದಸ್ಯ ಎಂ.ನಾಗೇಂದ್ರಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ರುದ್ರಪ್ಪ, ಗ್ರಾಮದ ಬಿ.ಕೊಟ್ರಪ್ಪ, ಹೆಚ್.ಲಿಂಗರಾಜ್, ಕೆ.ಎಂ.ಹಾಲಸ್ವಾಮಿ, ಷಣ್ಮುಖಪ್ಪ ಪಾಟೀಲ್, ಈರಣ್ಣ ಅಂಗಡಿ, ಕೆ.ಎಂ.ರಾಜಶೇಖರಯ್ಯ, ಹರಿಹರದ ಚೂರಿ ಜಗದೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
December 27, 2024