ಮಲೇಬೆನ್ನೂರು, ಡಿ.29- ಕುಂಬಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದ ಆದೇಶದಂತೆ ಜನವರಿ 1 ರಿಂದ ಶಾಲೆಯ ಆವರಣದಲ್ಲಿ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ತರಗತಿಗಳನ್ನು ಪ್ರಾರಂಭಿ ಸುವ ಬಗ್ಗೆ ಮಂಗಳವಾರ ಎಸ್ಡಿಎಂಸಿ ಪದಾಧಿಕಾರಿಗಳು ಹಾಗೂ ಪೋಷ ಕರು, ಶಿಕ್ಷಕರು ಸಭೆ ನಡೆಸಿದರು.
ಕೊರೊನಾ ಬಗ್ಗೆ ಜಾಗೃತಿ ವಹಿಸಿ, ಸುರಕ್ಷತಾ ಕ್ರಮಗಳನ್ನು ಕೈಗೊಂಡು ತರಗತಿಗಳನ್ನು ನಡೆಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಶ್ರೀಮತಿ ಗೌರಮ್ಮ ಅವರು ಡಿ.31 ರಂದು ವಯೋನಿವೃತ್ತಿ ಹೊಂದಲಿರುವ ಹಿನ್ನೆಲೆಯಲ್ಲಿ ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್ಸ್ವಾಮಿ ಅವರು ಗೌರಮ್ಮ ಅವರನ್ನು ಸನ್ಮಾನಿಸಿ, ಗೌರವಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಎಂ.ಹೆಚ್. ಶರಣ್, ಸದಸ್ಯರಾದ ದುರ್ಗಮ್ಮ, ಲಲಿ ತಮ್ಮ, ಕವಿತಾ, ಬೀರೇಶ್, ಹನು ಮಂತ, ಭೀಮೇಶ್, ಹೆಚ್.ಎಂ. ಸದಾ ನಂದ್, ಶಿಕ್ಷಕಿಯರಾದ ನೇತ್ರಾವತಿ, ಸಾವಿತ್ರಮ್ಮ ಮೂಲಿಮನಿ, ಶೃತಿ ಮತ್ತು ಪೋಷಕರು ಈ ವೇಳೆ ಹಾಜರಿದ್ದರು.