ದಾವಣಗೆರೆ, ಡಿ.27- ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಅಬ್ದುಲ್ ನಸೀರ್ ಅವರು ಖಾಸಗಿ ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸಲೆಂದು ಇಂದು ನಗರಕ್ಕಾಗಮಿಸಿದ್ದ ಸಂದರ್ಭದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಕೆ.ಬಿ. ಗೀತಾ ಅವರು ಸೌಹಾರ್ದ ಭೇಟಿ ಮಾಡಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ. ಮಂಜುನಾಥ್, ಸಹಕಾರ್ಯದರ್ಶಿ ಎಸ್. ಬಸವರಾಜ್ ಅವರುಗಳು ಉಪಸ್ಥಿತರಿದ್ದು ಅಬ್ದುಲ್ ನಸೀರ್ ಅವರನ್ನು ಸತ್ಕರಿಸಿದರು.
January 8, 2025