ಹೊನ್ನಾಳಿ, ಡಿ.23- ಪಟ್ಟಣದಲ್ಲಿ ಒಂದರಿಂದ 14 ವರ್ಷದೊಳಗಿನ ಶಾಲೆ ಬಿಟ್ಟ ಮಕ್ಕಳ ತಪಾಸಣೆಯನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ನಿರ್ವಹಿಸಿದರು. ಸರ್ಕಾರದ ಆದೇಶದಂತೆ ತುಂಗಭದ್ರ ಬಡಾವಣೆಯಲ್ಲಿ ಮೊಬೈಲ್ ಆಪ್ ಮೂಲಕ ಡಿಸೆಂಬರ್ 21 ರಿಂದ ಶಾಲೆ ಬಿಟ್ಟ ಮಕ್ಕಳ ತಪಾಸಣೆಗೆ ಮುಂದಾಗಿರುವ ಸಿಬ್ಬಂದಿಗಳು ಈವರೆಗೂ ಶಾಲೆಯಿಂದ ಹೊರಗುಳಿದ ಮಕ್ಕಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಪಂಚಾಯಿತಿ ಮುಖ್ಯಾಧಿಕಾರಿ ವೀರಭದ್ರಯ್ಯ, ಸದಸ್ಯ ಶ್ರೀಧರ್, ಸಿಬ್ಬಂದಿಗಳಾದ ರಾಮಚಂದ್ರ, ನಾಗೇಶ್ ಇನ್ನಿತರರು ಹಾಜರಿದ್ದರು.