ಮಲೇಬೆನ್ನೂರು, ಡಿ.23- ಧೂಳೆಹೊಳೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸಮರ್ಥಗೌಡ, ದಾನೇಶ್, ಶ್ರಾವಣಿ ಶಿಶುಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನು ಉತ್ತಮ ಆರೋಗ್ಯಕ್ಕಾಗಿ ನೀಡಲಾಯಿತು. ಹಿರಿಯ ಆರೋಗ್ಯ ಸಹಾಯಕ ಎಂ.ಉಮಣ್ಣ, ಕಿರಿಯ ಆರೋಗ್ಯ ಸಹಾಯಕ ಪ್ರಹ್ಲಾದ್, ಸವಿತಾ, ಆಶಾ ಕಾರ್ಯಕರ್ತೆಯರಾದ ಚಂದ್ರಿಕಾ, ಗದಿಗೆಮ್ಮ, ಕರಿಬಸಮ್ಮ, ಅಂಗನಾಡಿ ಕಾರ್ಯಕರ್ತೆಯರಾದ ಗೀತಾ, ವೀಣಾ, ನಿರ್ಮಲಾ, ಕರಿಬಸಮ್ಮ, ಪರಿಮಳ, ಮಂಜುಳಮ್ಮ ಭಾಗವಹಿಸಿದ್ದರು.
February 1, 2025