ಕೊಟ್ಟೂರು, ಡಿ.22- ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಾಳೆ ದಿನಾಂಕ 23 ರಂದು ಮತಗಟ್ಟೆ ಸಿಬ್ಬಂದಿಗೆ ನಡೆಯುವ ತರ ಬೇತಿ, ದಿನಾಂಕ 26 ರಂದು ಮಸ್ಟರಿಂಗ್, ದಿನಾಂಕ 27 ರಂದು ಡಿ-ಮಸ್ಟರಿಂಗ್, ದಿನಾಂಕ 30 ರಂದು ನಡೆಯುವ ಮತ ಎಣಿಕೆ ಕಾರ್ಯದ ಕೊಠಡಿಗಳಲ್ಲಿನ ಸಿದ್ದತೆ, ಭದ್ರತಾ ಕೊಠಡಿಯನ್ನು ಹರಪನಹಳ್ಳಿಯ ಸಹಾಯಕ ಆಯುಕ್ತ ಪ್ರಸನ್ನ ಕುಮಾರ್ ಅವರು ಪರಿಶೀಲನೆ ನಡೆಸಿದರು. ಯಾವುದೇ ಲೋಪವಾ ಗದಂತೆ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
ಈ ಸಮಯದಲ್ಲಿ ತಹಶೀಲ್ದಾರ್ ವಿ.ಎಂ.ಗೋಠೇಕರ್, ಉಪ ತಹಶೀಲ್ದಾರ್ ಅನ್ನದಾನೇಶ್, ಡಿ.ಶಿವಕುಮಾರ್, ಹಾಲಸ್ವಾಮಿ ಇದ್ದರು.