ಶಾಸಕ ಜಿ.ಕರುಣಾಕರ ರೆಡ್ಡಿ ವಿಶ್ವಾಸ
ಹರಪನಹಳ್ಳಿ, ಡಿ.21- ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಜರುಗುವ 28 ಗ್ರಾಮ ಪಂಚಾಯ್ತಿಗಳಲ್ಲಿ ಕನಿಷ್ಟ 18 ರಿಂದ 21 ಪಂಚಾಯ್ತಿಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ವಿವಿಧೆಡೆ ಕಾಂಕ್ರಿಟ್ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳು ಹಾಗೂ ತಾಲ್ಲೂಕಿನಲ್ಲಿ ನಾನು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಗ್ರಾಮೀಣ ಮತದಾರರಿಗೆ ಮನವರಿಕೆ ಮಾಡಿಕೊಡಲು ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದೇನೆ. ನಾನೂ ಸಹ ಪ್ರಚಾರ ಕೈಗೊಂಡಿದ್ದೇನೆ, ಬಿಜೆಪಿಗೆ ಉತ್ತಮ ವಾತಾವರಣವಿದೆ ಎಂದು ಅವರು ತಿಳಿಸಿದರು.
ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್, ಉಪಾಧ್ಯಕ್ಷೆ ಎನ್.ಭೀಮವ್ವ, ಬಿಜೆಪಿ ಘಟಕದ ಉಪಾಧ್ಯಕ್ಷ ಸಣ್ಣ ಹಾಲಪ್ಪ, ಜಿಲ್ಲಾ ಬಿಜೆಪಿ ಎಸ್.ಟಿ. ಘಟಕದ ಉಪಾಧ್ಯಕ್ಷ ಆರ್. ಲೋಕೇಶ್, ಪುರಸಭಾ ಸದಸ್ಯರುಗಳಾದ ಎಂ.ವಿ.ಅಂಜಿನಪ್ಪ, ಅಬ್ದುಲ್ ರಹಿಮಾನ್, ದ್ಯಾಮಜ್ಜಿ ರೊಕ್ಕಪ್ಪ, ಗೊಂಗಡಿ ನಾಗರಾಜ್, ಎಚ್.ಎಂ. ಅಶೋಕ್, ಟಿ.ವೆಂಕಟೇಶ್, ಜಾವೀದ್, ಕಿರಣ್ ಶಾನುಬಾಗ್, ಸುಮಾ ವಾಗೀಶ್, ಮುಖಂಡರಾದ ಎಂ.ಪಿ.ನಾಯ್ಕ, ಪ್ರಕಾಶ್ ಕೆಂಗಳ್ಳಿ, ಪುರಸಭಾ ಮುಖ್ಯಾಧಿಕಾರಿ ಬಿ.ಆರ್. ನಾಗರಾಜನಾಯ್ಕ, ಇಂಜಿನಿಯರ್ ಬಿರಾದಾರ, ಗುತ್ತಿಗೆದಾರ ಎಚ್. ಪ್ರವೀಣ್ಕುಮಾರ್, ಎಂ.ಸಂತೋಷ್, ಚಿಕ್ಕೇರಿ ಬಸಪ್ಪ, ಡಾ. ಎಂ.ಬಿ.ಅಧಿಕಾರ, ಶಿವಕುಮಾರ್ ಮತ್ತು ಇತರರು ಹಾಜರಿದ್ದರು.