ಹರಿಹರ : ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ಜಾಗೃತಿ

ಹರಿಹರ, ಡಿ.18- ನಾಗರಿಕರು ನಿರ್ಲಕ್ಷ್ಯದಿಂದ ಹಾಗೂ ಸುರಕ್ಷತೆಯ ಕ್ರಮಗಳನ್ನು ಅನುಸರಿಸದೇ ಇರುವುದರಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಸ್ತೆ  ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಗರ ಠಾಣೆಯ ಪಿಎಸ್ಐ ಸುನಿಲ್ ಹೇಳಿದರು.

ನಗರದ ಆಟೋ ನಿಲ್ದಾಣದ ಆವರಣದಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹೆಂಗಸರು ಮಾರುಕಟ್ಟೆ ಮತ್ತು ಜಾಗಿಂಗ್ ಮುಂತಾದ ಕಡೆಗಳಲ್ಲಿ ಹೋಗುವಂತಹ ಸಂದರ್ಭದಲ್ಲಿ ಆಭರಣಗಳನ್ನು ಪ್ರದರ್ಶಿಸಬಾರದು. ನಿಮ್ಮನ್ನು ಹಿಂಬಾಲಿಸುವ ಅನುಮಾ‌ನಾಸ್ಪದ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ದ್ವಿಚಕ್ರ ವಾಹನ ನಿಲ್ಲಿಸುವ ವೇಳೆ ತಪ್ಪದೇ ಹ್ಯಾಂಡ್ ಲಾಕ್  ಹಾಕುವುದು ಮತ್ತು ಬೀಗವನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು. ಮನೆಯಲ್ಲಿನ ಬೆಲೆ ಬಾಳುವ ವಸ್ತುಗಳನ್ನು ಬ್ಯಾಂಕಿನ ಸೇಫ್ಟಿ ಲಾಕರ್‌ಗಳಲ್ಲಿ ಇಡುವುದು ಸೂಕ್ತ ಎಂದರು. ಹತ್ತಿರದ ಪೊಲೀಸ್ ಠಾಣೆಯ ನಂಬರ್ ಕಡ್ಡಾಯವಾಗಿ ಇಟ್ಟುಕೊಂಡಿರಬೇಕು ಇತ್ಯಾದಿ ವಿಷಯಗಳ ಕುರಿತು ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಡಿ.ಟಿ. ಶ್ರೀನಿವಾಸ್, ಯಾಸಿನ್ ಉಲ್ಲಾ ಖಾನ್ ಇನ್ನಿತರಿದ್ದರು.

error: Content is protected !!