ಹರಿಹರಿ, ಡಿ.18- ಮಹಾರಾಷ್ಟ್ರದ ನಿಕಟಪೂರ್ವ ಮುಖ್ಯಮಂತ್ರಿಗಳೂ, ವಿರೋಧ ಪಕ್ಷದ ನಾಯಕರೂ ಆದ ದೇವೇಂದ್ರ ಫಡ್ನವೀಸ್ ಅವರನ್ನು ಹರ ಜಾತ್ರಾ ಮಹೋತ್ಸವ-2021ಕ್ಕೆ ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಆಹ್ವಾನಿಸಿದರು.
ಇದೇ ವೇಳೆ 2021 ರ ಯೋಗ ಕ್ಯಾಲೆಂಡರ್ ಅನ್ನು ಫಡ್ನವೀಸ್ ಅವರು ಬಿಡುಗಡೆಗೊಳಿಸಿದರು. ಶಾಸಕ ಮುರುಗೇಶ್ ನಿರಾಣಿ, ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಧರ್ಮದರ್ಶಿಗಳಾದ ಚಂದ್ರಶೇಖರ ಪೂಜಾರ, ರಾಮಿ ಹೋಟೆಲ್ ಮತ್ತು ರೆಸಾರ್ಟಿನ ನಿಶ್ಚಿತ ಶೆಟ್ಟಿ, ಜತಿನ್ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.