ದಾವಣಗೆರೆ, ಡಿ.19- ಇಲ್ಲಿನ ಡಿಸಿಎಂ ಟೌನ್ ಶಿಪ್ ಹಿಂಭಾಗದ ರಾಜೇಂದ್ರ ಬಡಾವಣೆ ಯಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಕಾರ್ತಿಕೋತ್ಸವ ಭಕ್ತರ ಭಕ್ತಿಯ ಬೆಳಕಿನೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ಕಾರ್ತಿಕೋತ್ಸವ ನಿಮಿತ್ತ ಭಕ್ತರು ದೇವಸ್ಥಾನದ ಆವರಣದಲ್ಲಿ ಜ್ಯೋತಿಯ ಪ್ರಜ್ವಲನೆ ಮಾಡಿ ಭಕ್ತಿ ಸಮರ್ಪಿಸಿದರು. ಶ್ರೀ ಬನಶಂಕರಿ ದೇವಿ, ಶ್ರೀ ಗಾಯತ್ರಿ ಮಾತೆ, ಶ್ರೀ ಲಕ್ಷ್ಮಿ ಮಾತೆಗೆ ವಿಶೇಷಾಲಂಕಾರ ಮಾಡಲಾಗಿತ್ತು.