ದಾವಣಗೆರೆ, ಡಿ. 19- ದಾವಣಗೆರೆ ಅಡಿಕೆ ಅಭಿವೃದ್ಧಿ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘ ನಿ. ವತಿಯಿಂದ ನಗರದ ತರಳಬಾಳು ಸಭಾ ಭವನದಲ್ಲಿ ಮಿನಿ ಕೃಷಿ ಯಂತ್ರ ಮೇಳ ನಡೆಯಿತು. ವಿವಿಧ ಕಂಪನಿಯ ಟ್ರ್ಯಾಕ್ಟರ್ಗಳು, ನವೀನ ಮಾದರಿಯ ಹಸಿ ಹಾಗೂ ಒಣ ಅಡಿಕೆ ಸುಲಿಯುವ ಯಂತ್ರ, ಗೊರಬಲು ಯಂತ್ರ ಮುಂತಾದ ಯಂತ್ರಗಳ ಪ್ರದರ್ಶನ ನಡೆಯಿತು. ಸಂಸ್ಥಾಪಕ ಅಧ್ಯಕ್ಷರಾದ ಹೆಚ್.ಜಯಣ್ಣ, ಅಧ್ಯಕ್ಷರು ಬಿ.ಕೆ. ಶಿವಕುಮಾರ್, ನಿರ್ದೇಶಕರುಗಳಾದ ಎನ್.ಜೆ. ಪುಟ್ಟಸ್ವಾಮಿ, ಶಾಮನೂರು ಲಿಂಗರಾಜು, ಹೆದ್ನೆ ಮುರುಗೇಶಪ್ಪ, ಎಂ.ಹೆಚ್. ಗೌಡ್ರು, ಹೆಚ್.ಜಿ. ಮರುಳಸಿದ್ದಪ್ಪ, ಸದಸ್ಯ ಹೆಚ್.ಆರ್. ಮರುಳಸಿದ್ದಪ್ಪ, ಮಾಜಿ ಅಧ್ಯಕ್ಷೆ ಶ್ರೀಮತಿ ಮಂಗಳಗೌರಮ್ಮ ಹಾಗೂ ರೈತ ಸದಸ್ಯರು ಉಪಸ್ಥಿತರಿದ್ದರು.
February 26, 2025