ಮಲೇಬೆನ್ನೂರು, ಡಿ.19- ಹಾಲಿವಾಣ ಗ್ರಾ.ಪಂ.ನ 16 ಸ್ಥಾನ ಗಳಲ್ಲಿ 2 ಸ್ಥಾನಗಳಿಗೆ ಅವಿರೋಧ ಆಯ್ಕೆಯಾ ಗಿದ್ದು, ಉಳಿದ 14 ಸ್ಥಾನ ಗಳಿಗೆ ಇದೇ ದಿನಾಂಕ 27 ರಂದು ಚುನಾವಣೆ ನಡೆಯಲಿದೆ. ಹಾಲಿವಾಣದಲ್ಲಿ ಬಿಸಿಎಂ `ಬಿ’ ಕ್ಷೇತ್ರದಿಂದ ಶ್ರೀಮತಿ ಲಲಿತಮ್ಮ ವಿಜಯ ಕುಮಾರ್ ಮತ್ತು ದಿಬ್ಬದಹಳ್ಳಿ ಗ್ರಾಮದ ಸಾಮಾನ್ಯ ಕ್ಷೇತ್ರದಿಂದ ಡಿ.ಇ.ಓಂಕಾರಪ್ಪ ಅವರು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಹಾಲಿವಾಣದಲ್ಲಿ ಉಳಿದ 9 ಸ್ಥಾನಗಳಿಗೆ 22 ಅಭ್ಯರ್ಥಿಗಳು ಮತ್ತು ಕೊಮಾರನಹಳ್ಳಿಯಲ್ಲಿ 4 ಸ್ಥಾನಗಳಿಗೆ 9 ಅಭ್ಯರ್ಥಿ ಗಳು ಹಾಗೂ ಕೊಪ್ಪದಲ್ಲಿ 1 ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಹಾಲಿವಾಣದಲ್ಲಿ ಬಿಸಿಎಂ `ಬಿ’ ಕ್ಷೇತ್ರದಿಂದ ಆಯ್ಕೆಯಾಗಿರುವ ಲಲಿತಮ್ಮ ಅವರನ್ನು ಶಾಸಕ ಎಸ್.ರಾಮಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ.ಪರಮೇಶ್ವರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಅಬೀದ್ ಅಲಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ.ಹನುಮಂತಪ್ಪ ಮತ್ತಿತರರು ಅಭಿನಂದಿಸಿದರು.