ದಾವಣಗೆರೆ, ಡಿ.20- ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಯ್ಕೆ ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತು ಕಾರ್ಯಾಗಾರವು ನಿನ್ನೆ ನಡೆಯಿತು.
ಸಾವಿತ್ರಿ ಬಾಫುಲೆ ಮಹಿಳಾ ಸಂಘಟನೆಯ ರಾಜ್ಯ ಸಂಚಾಲಕಿ ಚಂದ್ರಮ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಅಧ್ಯಕ್ಷರಾಗಿ ಸುಹೀಲ್ ಭಾಷಾ, ಉಪಾಧ್ಯಕ್ಷರಾಗಿ ದೇವೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ, ಸಹ ಕಾರ್ಯದರ್ಶಿ ಕಣಿವೆ ಮಾರಕ್ಕ, ಖಜಾಂಚಿಯಾಗಿ ಬಾಲಪ್ಪ, ಜಿಲ್ಲಾ ಸಂಚಾಲಕರಾಗಿ ಹೆಚ್. ಬಸವರಾಜ್ ಹಾಗೂ ಮರಿಯಪ್ಪ, ಎಂ. ಶಬ್ಬೀರ್ ಸಾಬ್, ಸಾವಿತ್ರಮ್ಮ, ಅಫ್ಜಲ್ ಬೇಗ್, ಜೋಯಾ, ಹಬೀಬುಲ್ಲಾ ಅವರುಗಳನ್ನು ಸಲಹಾ ಸಮಿತಿಗೆ ಆಯ್ಕೆ ಮಾಡಲಾಯಿತು.