ದಾವಣಗೆರೆ, ಡಿ.18- ಹರಿಹರದ ತುಂಗಭದ್ರಾ ನದಿ ಪುಷ್ಕರದಂಗವಾಗಿ ಅಲ್ಲಿನ ಶ್ರೀ ರಾಘವೇಂದ್ರ ಮಠದ ಆವರಣದಲ್ಲಿ ನೆರವೇರುತ್ತಿರುವ ನಿತ್ಯ ಬ್ರಹ್ಮಯಜ್ಞದ ಧನ್ವಂತರಿ ಯಾಗದ ಸುಕ್ಲಯಜುರ್ವೇದ ಮಂತ್ರ ಪಠಣಕ್ಕಾಗಮಿಸಿದ್ದ ಅಗಡಿ ಆನಂದ ವನದ ವೇದಾಧ್ಯಯನ ವಟುಗಳಿಗೆ ನಿತ್ಯೋಪಯೋಗಿ ವಸ್ತುಗಳನ್ನು ವಿಕಾಸ ತರಂಗಿಣಿ, ಆಂಡಾಳ್ ಗೋಷ್ಠಿ, ಸ್ಫೂರ್ತಿ ಸೇವಾ ಟ್ರಸ್ಟ್ ವತಿಯಿಂದ ನೀಡಲಾಯಿತು. ಅಗಡಿ ಆನಂದ ವನದ ಶ್ರೀ ವಿಶ್ವನಾಥ ಸ್ವಾಮೀಜಿ, ವೇದ ಪ್ರಾಧ್ಯಾಪಕ ಕೃಷ್ಣಶರ್ಮ, ಹರಿಹರ ಶ್ರೀ ರಾಘವೇಂದ್ರ ಮಠದ ವೇದಮೂರ್ತಿ ಶ್ರೀ ವರಾಹಾಚಾರ್ಯರು, ಸ್ಫೂರ್ತಿ ಸೇವಾ ಟ್ರಸ್ಟಿನ ಬಿ. ಸತ್ಯನಾರಾಯಣ ಮೂರ್ತಿ, ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ್ ವಿಶೇಷ ಆಹ್ವಾನಿತರಾಗಿದ್ದರು.
January 10, 2025