ದಾವಣಗೆರೆ, ಡಿ.18- ನಗರದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯಿಂದ 65ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ವಿಶ್ವ ಕೈ ತೊಳೆಯುವ ದಿನಾಚರಣೆ ಅಂಗವಾಗಿ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಲಾಯಿತು.
ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆ ಚೇರ್ಮನ್ ಡಾ.ಎ.ಎಂ. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ, ವೈಸ್ ಚೇರ್ಮನ್ ಡಿ.ಎಸ್. ಸಿದ್ದಣ್ಣ, ಜನರಲ್ ಸೆಕ್ರೆಟರಿ ಸಿ.ಎ. ಉಮೇಶ್ ಶೆಟ್ಟಿ, ಕಾರ್ಯದರ್ಶಿ ಡಿ.ಎಸ್. ಸಾಗರ್, ಖಜಾಂಚಿ ಅನಿಲ್ ಬಾರೆಂಗಳ್ ಉಪಸ್ಥಿತರಿದ್ದರು.
ನಿರ್ದೇಶಕರಾದ ಆನಂದ ಜ್ಯೋತಿ, ಡಾ. ಶಿಲ್ಪಾಶ್ರೀ, ಇನಾಯತ್ ವುಲ್ಲಾ, ಡಿ.ಎನ್. ಶಿವಾನಂದ, ವಸಂತರಾಜು, ಕೆ.ಕೆ. ನಾಗರಾಜ, ರವಿ ಕುಮಾರ, ಶ್ರೀಕಾಂತ ಬಗರೆ, ಮೋಹನ್ ಕುಮಾರ್, ನರೇಂದ್ರ ಪ್ರಕಾಶ್, ಕರಿಬಸಪ್ಪ, ಶೇಷಾಚಲ, ಪ್ರಹ್ಲಾದ್ ಭಟ್, ನಂದೀಶ್ ಬಾದಾಮಿ, ಮಹಾಂತೇಶ್, ಉಮಾರಾಣಿ, ವಿಶ್ವನಾಥ್, ನವಣಿ ಇನ್ನಿತರರಿದ್ದರು.