ನ್ಯಾಮತಿ, ಡಿ.18- ದಾವಣಗೆರೆಯ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ನ್ಯಾಮತಿ ತಾಲ್ಲೂಕಿನ ಸುರಹೊನ್ನೆ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಕಡಲೆ ಬೆಳೆಯ ಗುಚ್ಚ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬೇಸಾಯ ತಜ್ಞ ಮಲ್ಲಿಕಾರ್ಜುನ್ ಅವರು, ಕಡಲೆ ಬಿತ್ತನೆಯಾಗಿ 15 ದಿನವಾಗಿದ್ದು, ಕಾಯಿ ಕೊರಕದ ಹುಳುವಿನ ಬಾಧೆ ಕಂಡು ಬಂದಲ್ಲಿ, ತತ್ತಿ ನಾಶಕ ಪ್ರಫೆನೋಫಾಸ್ 2ml ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಣೆ ಮಾಡುವುದು ಸೂಕ್ತ. ಇದರ ಜೊತೆಗೆ ಒಂದು ಎಕರೆ ಪ್ರದೇಶಕ್ಕೆ ನಾಲಕ್ಕು ಮೋಕ ಬಲೆಗಳನ್ನು ಅಳವಡಿಸುವುದರಿಂದ ಕಾಯಿಕೊರಕದ ಹುಳುವಿನ ಬಾಧೆಯನ್ನು ನಿರ್ವಹಣೆ ಮಾಡಬಹುದು. ರೈತರಿಗೆ ಮೋಹಕ ಬಲೆಗಳನ್ನು ಅಳವಡಿಸುವುದನ್ನು ಪದ್ಧತಿ ಪ್ರಾತ್ಯಕ್ಷಿಕೆ ಮೂಲಕ ತೋರಿಸಿ ಕೊಡಲಾಯಿತು. ಪ್ರಾತ್ಯಕ್ಷಿಕೆಯ ರೈತರಿಗೆ ಮೋಹಕ ಬಲೆಗಳನ್ನು ವಿತರಿಸಲಾಯಿತು.