ಜಗಳೂರು, ಡಿ.18- ಪಟ್ಟಣದ ಮಹಾತ್ಮ ಗಾಂಧಿ ವೃತ್ತದ ಬಳಿ ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಜಾಗೃತಿ ಮೂಡಿಸಲಾಯಿತು.
ದಾವಣಗೆರೆ ಗ್ರಾಮಾಂತರ ಡಿವೈಎಸ್ ನರಸಿಂಹ ಪಿ. ತಾಮ್ರಧ್ವಜ ಮಾತನಾಡಿ, ಪಟ್ಟಣದ ನಿವಾಸಿಗಳು ಮನೆಗಳನ್ನು ಬೀಗ ಹಾಕಿ ಬೇರೆಡೆಗೆ ಹೋಗುವಾಗ ಪೊಲೀಸ್ ಠಾಣೆಗೆ ಲಿಖಿತ ಪತ್ರದೊಂದಿಗೆ ಮಾಹಿತಿ ನೀಡಬೇಕು. ಆಗ ಪೊಲೀಸ್ ಗಸ್ತು ನೀಡಲಾಗುವುದು ಎಂದರು.
ಕಳ್ಳತನ, ಅಪಘಾತದಿಂದ ಜಾಗೃತರಾಗಿರಿ. ಪೊಲೀಸ್ ಅಗ್ನಿ, ವೈದ್ಯಕೀಯ ಯಾವುದೇ ತುರ್ತು ಸಂದರ್ಭದಲ್ಲಿ ತ್ವರಿತ ಸೇವೆಗಾಗಿ ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಪೊಲೀಸ್ ಅಗ್ನಿ ವಿಪತ್ತು 112 ಕ್ಕೆ ಕರೆ ಮಾಡಿರಿ ಎಂದು ಮನವಿ ಮಾಡಿದರು.
ಸಾರ್ವಜನಿಕರ ಮಾಹಿತಿಯ ನಂತರ ಕಂಪ್ಯೂಟರ್ ಆಧಾರಿತ ಹಾಗೂ ಮೊಬೈಲ್ ಲೊಕೇಷನ್ ಸಹಾಯದಿಂದ ಪರಿಶೀಲಿಸಿ ಡಿಜಿಟಲ್ ನಕ್ಷೆಯನ್ನು ಗುರುತಿಸಿ ತುರ್ತು ಸಂದರ್ಭದಲ್ಲಿ ತೊಂದರೆಗೊಳಗಾದವರಿಗೆ ರಕ್ಷಣೆ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಿಪಿಐ ಡಿ.ದುರುಗಪ್ಪ ಪಿಎಸ್ಐ ಸಂತೋಷ್ ಬಾಗೋಜಿ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.