ದಾವಣಗೆರೆ, ಡಿ.17- ದೂಡಾದಿಂದ ಹೊಸ ಲೇಔಟ್ ನಿರ್ಮಾಣ ನಿರ್ಧಾರದ ಹಿನ್ನೆಲೆಯಲ್ಲಿ ನಗರ ಪಾಲಿಕೆ ವ್ಯಾಪ್ತಿಗೆ ಬರುವ ರಾಷ್ಟ್ರೀಯ ಹೆದ್ದಾರಿ ಸಮೀಪದ ಹಳೇ ಕುಂದುವಾಡಕ್ಕೆ ದಾವಣಗೆರೆ-ಹರಿಹರ ನಗರಾಭಿ ವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜ ನಹಳ್ಳಿ ಶಿವಕುಮಾರ್ ಅವರು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರೈತರು, ಅಧಿಕಾರಿಗಳೊಂ ದಿಗೆ ಸಮಾಲೋಚನೆ ನಡೆಸಿ, ಕೆಲ ದಿನಗಳಲ್ಲಿ ಇಲ್ಲಿ ನೂರಕ್ಕೂ ಹೆಚ್ಚು ಎಕರೆ ಜಮೀನು ಖರೀ ದಿಸಿ ಲೇಔಟ್ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ. ಈ ಸಂಬಂಧ ರೈತರು ಕೂಡ ಕೃಷಿ ಜಮೀನು ನೀಡಲು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ದೂಡ ಅಧಿಕಾರಿಗಳು ತಿಳಿಸಿದ್ದಾರೆ.