ದಾವಣಗೆರೆ, ಡಿ.17 – ದಾವಣಗೆರೆ ಜಿಲ್ಲೆ ಟೆನ್ನಿಸ್ ಅಸೋ ಸಿಯೇ ಷನ್ನಿಂದ ಕಳೆದ ಎರಡು ದಿನಗಳ ಕಾಲ ನಗರದಲ್ಲಿ ಆಹ್ವಾ ನಿತ ಟೆನ್ನಿಸ್ ಟೂರ್ನಿ ಏರ್ಪಡಿಸಲಾಗಿತ್ತು. ಪಂದ್ಯಾವಳಿಯಲ್ಲಿ ದಾವಣಗೆರೆ, ಚಿತ್ರದುರ್ಗ, ಹೊಸದುರ್ಗ, ಚಳ್ಳಕೆರೆ, ಧಾರವಾಡ, ಸಿಂಧನೂರು, ಬಾಗಲಕೋಟೆ ಮತ್ತು ಮೈಸೂರು ಜಿಲ್ಲೆಗಳಿಂದ 116 ಆಟಗಾರರು 58 ತಂಡಗಳಾಗಿ ಸ್ಪರ್ಧಿಸಿದ್ದು, ಅದರಲ್ಲಿ 60 ವರ್ಷ ಮೇಲಿನವರ ವಿಭಾಗದಲ್ಲಿ ಕೆ.ಪಿ. ಚಂದ್ರಪ್ಪ, ಬಿ.ಕೆ. ನಿಂಗಪ್ಪ ಗೆಲುವು ಸಾಧಿಸಿದರು. ಡಾ.ಸುಬ್ಬರಾವ್ ಮತ್ತು ಮಾರುತಿ ತಂಬೋಳಿ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟರು.
45 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ವೆಂಕಟೇಶ್ ಮತ್ತು ಬವರ್ಲಾಲ್ ಮೈಸೂರು ಗೆಲುವು ಸಾಧಿಸಿದ್ದು, ಎಲ್. ದಿನೇಶ್ ಮತ್ತು ಡಿ. ರಮೇಶ್ ಮೈಸೂರು ರನ್ನರ್ಸ್ ಸ್ಥಾನ ಪಡೆದರು. 35 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಡಾ. ಸುಜಯ್, ಡಾ. ಯೋಗೀಂದ್ರ ಬಾಗಲಕೋಟೆ ಪ್ರಥಮ ಸ್ಥಾನ ಪಡೆದರೆ, ರಘುನಂದನ್ ಆರ್. ಅಂಬರ್ಕರ್ ಮತ್ತು ಆರ್. ಕಿರಣ್ ರನ್ನರ್ಸ್ ಆಗಿ ಹೊರಹೊಮ್ಮಿದ್ದಾರೆ.
ವಿಜೇತರಿಗೆ ಸಂಸ್ಥೆಯ ಅಧ್ಯಕ್ಷ ಡಾ. ಎಸ್.ಎಂ. ಬ್ಯಾಡಗಿ ಮತ್ತು ರಂಜನ ರವಿನಾರಾಯಣ ಅವರು ಪಾರಿತೋಷಕ ನೀಡಿ ಗೌರವಿಸಿದ್ದಾರೆ.