ದಾವಣಗೆರೆ, ಡಿ.16- ರಸ್ತೆ ಬದಿಯಲ್ಲಿ ಮಲಗುವ ನಿರಾಶ್ರಿತರಿಗೆ ಹಾಸಿಗೆ, ಹೊದಿಕೆಗಳನ್ನು ವಿತರಿಸುವ ಮುಖೇನ ಪೊಲೀಸರು ಮಾನವೀ ಯತೆ ಮೆರೆದಿದ್ದಾರೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಉಪ ವಿಭಾಗದ ಉಪಾಧೀಕ್ಷಕ ನರಸಿಂಹ ತಾಮ್ರಧ್ವಜ ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಪಿಎಸ್ಐ ರವಿಕುಮಾರ್ ಹಾಗೂ ಸಿಬ್ಬಂದಿಗಳು ಸೋಮ ವಾರ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಹರಿಹರದ ರಸ್ತೆ ಬದಿಯಲ್ಲಿ ಹಾಸಿಗೆ, ಹೊದಿಕೆ ಇಲ್ಲದೆ ಮಲಗುವ ನಿರಾಶ್ರಿತರಿಗೆ ಹಾಸಿಗೆ, ಹೊದಿಕೆಗಳನ್ನು ವಿತರಿಸಿದ್ದು, ಆ ಮುಖೇನ ಪೊಲೀಸರ ಜನ ರಕ್ಷಣೆ ಮಾಡುವ ಜೊತೆಗೆ ಸಮಾಜಮುಖಿ ಜನಸೇವೆಗೂ ಸಿದ್ಧ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.
January 9, 2025