ಹರಪನಹಳ್ಳಿ, ಡಿ.15- ಹಸಿರು ಮಾತೆ ಸಾಲುಮರದ ತಿಮ್ಮಕ್ಕನ ಆರೋಗ್ಯ ಸುಧಾರಿಸಲೆಂದು ಆಶಿಸಿ, ತಾಲ್ಲೂಕಿನ ಕಡತಿ ಗ್ರಾಮದಲ್ಲಿ ಗ್ರಾಮ ಅರಣ್ಯ ಸೇವಾ ಟ್ರಸ್ಟ್ ವತಿಯಿಂದ ವಿಶೇಷ ಪೂಜೆ ನೆರವೇರಿಸಲಾಯಿತು. ಟ್ರಸ್ಟ್ನ ಯುವಕರು ಮಹೇಶ್ವರಸ್ವಾಮಿಗೆ ಪಂಚಾಮೃತ ಅಭಿಷೇಕದ ಮೂಲಕ ವಿಶೇಷ ಪೂಜೆ ಸಲ್ಲಿಸಿ, ತಿಮ್ಮಕ್ಕನವರ ಆರೋಗ್ಯ ಬೇಗ ಸುಧಾರಿಸಲಿ ಎಂದು ಪ್ರಾರ್ಥಿಸಿದರು. ವೀರೇಂದ್ರ ಗುರುದೇವರ ಮಠ, ಗ್ರಾಮ ಅರಣ್ಯ ಸೇವಾ ಟ್ರಸ್ಟ್ನ ಅಧ್ಯಕ್ಷ ಸಾರಥಿ ಗುಡ್ಡಪ್ಪ, ಕಾರ್ಯದರ್ಶಿ ಕಾರ್ತಿಕ, ನಿಂಗರಾಜ್ ಬಾರಿಕರ್, ಕುಬೇರಪ್ಪ, ಕೆ.ಟಿ. ಮಹೇಶ್ವರ, ಎಂ.ಎಂ. ಮಹೇಶ್, ಶಂಭುಲಿಂಗ, ಚೆನ್ನಪ್ಪ, ಪ್ರಶಾಂತ ಇನ್ನಿತರರು ಪಾಲ್ಗೊಂಡಿದ್ದರು.
January 11, 2025