ಮಲೇಬೆನ್ನೂರು, ಡಿ.14- ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಹಾಗೂ ಎಪಿಎಂಸಿ ಕಾಯ್ದೆಯಂತಹ ರೈತ ವಿರೋಧಿ ಮಸೂದೆಗಳನ್ನು ಹಿಂಪಡೆಯುವಂತೆ ಮತ್ತು ಹರಿಹರ ತಾಲ್ಲೂಕಿನಲ್ಲಿ ಇದುವರೆಗೂ ಬಗರ್ ಹುಕ್ಕುಂ ಕಮಿಟಿ ರಚನೆ ಮಾಡದಿರುವುದನ್ನು ಖಂಡಿಸಿ, ಮಲೇಬೆನ್ನೂರಿನಲ್ಲಿ ಸೋಮವಾರ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ನೀರಾವರಿ ಇಲಾಖೆಯಿಂದ ನಾಡ ಕಛೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ನಂತರ ನಾಡ ಕಛೇರಿಗೆ ತೆರಳಿ ಉಪತಹಶೀಲ್ದಾರ್ ಆರ್. ರವಿ ಅವರಿಗೆ ಮನವಿ ಪತ್ರ ನೀಡಿದರು.
ಹರಿಹರ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೋಗಳಿ ಮಂಜುನಾಥ್, ಗೌರವಾಧ್ಯಕ್ಷ ಬಿ. ಬಸವರಾಜಪ್ಪ, ಭೋವಿ ಶಿವಕುಮಾರ್, ಗಡಗಿ ಆನಂದಪ್ಪ, ಕೊಕ್ಕನೂರು ಅಂಜಿನಪ್ಪ, ಫೈಜುಲ್ಲಾ, ಕೊಮಾರನಹಳ್ಳಿ ಮೂರ್ತಿ, ಬಿ. ನಾಗರಾಜ್, ಜಿ.ಹೆಚ್. ಮಂಜುನಾಥ್, ಎಸ್.ಜಯಪ್ಪ, ಮಾರುತಿ, ಬಿ. ಚಂದ್ರಪ್ಪ, ಪಿ.ಎಸ್. ಹಾಲೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.